ಮರಾಠರ ಮಾತ್ರವಲ್ಲ, ತಮಿಳರ ನಿಗಮವೂ ಮಾಡುತ್ತೇವೆ | ಡಿಸಿಎಂ ಅಶ್ವತ್ ನಾರಾಯಣ್ - Mahanayaka

ಮರಾಠರ ಮಾತ್ರವಲ್ಲ, ತಮಿಳರ ನಿಗಮವೂ ಮಾಡುತ್ತೇವೆ | ಡಿಸಿಎಂ ಅಶ್ವತ್ ನಾರಾಯಣ್

04/12/2020

ಬೆಂಗಳೂರು: ಮರಾಠರಿಗೆ ಮಾತ್ರವಲ್ಲ ತಮಿಳರಿಗೂ ನಿಗಮ ಮಾಡುತ್ತೇವೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಅವರು ಹೇಳಿದ್ದು, ನಾಳೆ ಕನ್ನಡ ಪರ ಸಂಘಟನೆಗಳು, ಮರಾಠರ ನಿಗಮ ಮಂಡಳಿ ವಿರುದ್ಧ ಕರ್ನಾಟಕ ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ ಡಿಸಿಎಂ ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ.


ಈ ಮರಾಠಿಗರು ನಮ್ಮವರು ಹಾಗಾಗಿ ಅವರ ಅಭಿವೃದ್ಧಿ ನಿಗಮ ಮಾಡಲಾಗಿದೆ. ನಾಳೆ ದಿನ ತಮಿಳರು ಬಂದು ನಮಗೂ ನಿಗಮ ಬೇಕು ಎಂದು ಕೇಳಿದರೂ ಮಾಡುತ್ತೇವೆ ಎಂದು ಅಶ್ವತ್ ನಾರಾಯಣ್ ಹೇಳಿದರು.

ತಮಿಳಿಗರು ಕೂಡ ನಮ್ಮ ರಾಜ್ಯದಲ್ಲಿ 10 ವರ್ಷಗಳಿಂದ ಇದ್ದಾರೆ. ಇಲ್ಲಿ 10‌ ವರ್ಷಗಳಿಂದ ಇದ್ದರೆ ಅವರು ಕನ್ನಡಿಗರು ಎಂದಾಗುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ತಮಿಳರ ಅಭಿವೃದ್ಧಿ ನಿಗಮವನ್ನೂ ರಚನೆ ಮಾಡುವ ಬಗ್ಗೆ ಸುಳಿವು ನೀಡಿದರು.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ