ಗಾಝಾ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾದ ಪತ್ರಕರ್ತ, ಛಾಯಾಗ್ರಾಹಕ ದುರ್ಮರಣ - Mahanayaka
12:04 PM Tuesday 14 - October 2025

ಗಾಝಾ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾದ ಪತ್ರಕರ್ತ, ಛಾಯಾಗ್ರಾಹಕ ದುರ್ಮರಣ

01/08/2024

ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ಪತ್ರಕರ್ತ ಇಸ್ಮಾಯಿಲ್ ಅಲ್-ಘೌಲ್ ಹಾಗೂ ಛಾಯಾಗ್ರಾಹಕ ರಮಿ ಅಲ್-ರಿಫಿ ಮೃತಪಟ್ಟಿದ್ದಾರೆ ಎಂದು ಅಲ್ ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಝಾ ಮೇಲಿನ ತನ್ನ ಸುದೀರ್ಘ 10 ತಿಂಗಳ ದಾಳಿಯಲ್ಲಿ ಪತ್ರಕರ್ತರನ್ನು ಕೊಲ್ಲುತ್ತಿರುವ ಆರೋಪವನ್ನು ನಿರಾಕರಿಸುತ್ತಲೇ ಬರುತ್ತಿರುವ ಇಸ್ರೇಲ್, ಈ ಸಾವುಗಳ ಕುರಿತು ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.


Provided by

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಗಾಝಾ ಪಟ್ಟಣದ ಪಶ್ಚಿಮದಲ್ಲಿರುವ ಶತಿ ನಿರಾಶ್ರಿತರ ಶಿಬಿರದ ಮೇಲೆ ಬುಧವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದಾಗ, ಈ ಇಬ್ಬರು ವರದಿಗಾರರು ಮೃತಪಟ್ಟಿದ್ದಾರೆ.

ಬುಧವಾರ ಇರಾನ್ ರಾಜಧಾನಿಯಾದ ಟೆಹ್ರಾನ್ ನಲ್ಲಿ ಕ್ಷಿಪಣಿ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇಸ್ಮಾಯಿಲ್ ಹನಿಯೆಹ್ ರ ಗಾಝಾ ನಿವಾಸದ ಬಳಿಯ ಪ್ರದೇಶದಲ್ಲಿ ಈ ಇಬ್ಬರು ವರದಿ ಮಾಡಲು ಮೊಕ್ಕಾಂ ಹೂಡಿದ್ದರು.
ತನ್ನ ಇಬ್ಬರು ಪತ್ರಕರ್ತರ ಹತ್ಯೆಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿರುವ ಅಲ್ ಜಝೀರಾ ಮೀಡಿಯಾ ನೆಟ್ ವರ್ಕ್, ಈ ಹತ್ಯೆಗಳನ್ನು ಇಸ್ರೇಲ್ ಸೇನೆಯು ಗುರಿಯಾಗಿಸಿಕೊಂಡು ನಡೆಸಿರುವ ಹತ್ಯೆಗಳು ಎಂದು ಆರೋಪಿಸಿದ್ದು, “ಈ ಯುದ್ಧಾಪರಾಧಗಳ ಸಂಚುಕೋರರನ್ನು ಶಿಕ್ಷೆಗೊಳಪಡಿಸಲು ಎಲ್ಲ ರೀತಿಯ ಕಾನೂನು ಕ್ರಮಗಳೊಂದಿಗೆ ಮುಂದುವರಿಯಲಾಗುವುದು” ಎಂದು ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ