ಮಾದರಿ ನಡೆ: ರಂಝಾನ್ ನಲ್ಲಿ ಮುಸ್ಲಿಂ ನೌಕರರಿಗೆ ಕೆಲಸದ ಅವಧಿಯನ್ನು ಕಡಿತಗೊಳಿಸಿದ ತೆಲಂಗಾಣ ಸರ್ಕಾರ - Mahanayaka

ಮಾದರಿ ನಡೆ: ರಂಝಾನ್ ನಲ್ಲಿ ಮುಸ್ಲಿಂ ನೌಕರರಿಗೆ ಕೆಲಸದ ಅವಧಿಯನ್ನು ಕಡಿತಗೊಳಿಸಿದ ತೆಲಂಗಾಣ ಸರ್ಕಾರ

18/02/2025

ರಂಝಾನ್ ತಿಂಗಳಲ್ಲಿ ತೆಲಂಗಾಣ ಸರಕಾರವು ವಿವಿಧ ಇಲಾಖೆಗಳ ಮುಸ್ಲಿಂ ನೌಕರರಿಗೆ ಕೆಲಸದ ಅವಧಿಯನ್ನು ಕಡಿತಗೊಳಿಸಿದೆ. ಮಾರ್ಚ್ 2 ರಿಂದ 31ರವರೆಗೆ ಮುಸ್ಲಿಂ ನೌಕರರು ಸಂಜೆ 4 ಗಂಟೆಗೆ ಕಚೇರಿಯಿಂದ ತೆರಳಲು ಸರಕಾರ ಅವಕಾಶ ನೀಡಿದೆ.


Provided by

ಸರ್ಕಾರಿ ಶಿಕ್ಷಕರು, ಮಂಡಳಿ ಸದಸ್ಯರು, ಗುತ್ತಿಗೆ ನೌಕರರು ಹಾಗೂ ಸಾರ್ವಜನಿಕ ಸ್ವಾಮ್ಯದ ಇಲಾಖೆಗಳಲ್ಲಿರುವ ಮುಸ್ಲಿಂ ಸಿಬ್ಬಂದಿಗಳಿಗೆ ಕೆಲಸದ ಅವಧಿ ಕಡಿತ ಅನ್ವಯವಾಗಲಿದೆ. ರಮಝಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದ ನೌಕರರ ಅನುಕೂಲಕ್ಕಾಗಿ ಕೆಲಸದ ಅವಧಿ ಕಡಿತ ಮಾಡಲಾಗಿದೆ. ಅಗತ್ಯ ಪ್ರಾರ್ಥನೆ ಸಲ್ಲಿಸಲು ಕೂಡ ಅವಕಾಶ ನೀಡಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಹೇಳಿದ್ದಾರೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ