ಮದುವೆ ವಿಚಾರಕ್ಕೆ ಗಲಾಟೆ: ತಂದೆಯಿಂದಲೇ ಪುತ್ರನ ಕೊಲೆ - Mahanayaka

ಮದುವೆ ವಿಚಾರಕ್ಕೆ ಗಲಾಟೆ: ತಂದೆಯಿಂದಲೇ ಪುತ್ರನ ಕೊಲೆ

crime news
19/12/2021

ತಮಿಳುನಾಡು: ಮದುವೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ತಂದೆಯೇ ಪುತ್ರನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ.


Provided by

ಶಿವಮಣಿ (30) ತಂದೆಯಿಂದಲೇ ಕೊಲೆಯಾದ ಯುವಕ. ಪಾನಮತ್ತನಾಗಿದ್ದ ತಂದೆ ಕೇಶವನ್, ಕೊಡಲಿಯಿಂದ ಕೊಚ್ಚಿ ಮಗನನ್ನು ಕೊಲೆ ಮಾಡಿದ್ದಾನೆ.

ಕೂಲಿ ಕಾರ್ಮಿಕನಾಗಿದ್ದ ಕೇಶವನ್ ಮತ್ತು ಅವರ ಪತ್ನಿ ಪಳನಿಯಮ್ಮಾಳ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿತ್ತು. ಇದೀಗ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಮನೆಯವರು ಅಸಡ್ಡೆ ತೋರುತ್ತಿದ್ದಾರೆ ಎಂದು ಶಿವಮಣಿ ಮನೆಯವರೊಂದಿಗೆ ಜಗಳ ತೆಗೆದಿದ್ದಾನೆ. ಮೂರು ವರ್ಷಗಳಿಂದ ವಿದೇಶದಲ್ಲಿದ್ದ ಶಿವಮಣಿ, ಮನೆಗೆ ಕಳುಹಿಸುತ್ತಿದ್ದ ಹಣದ ವಿಚಾರದಲ್ಲೂ ಜಗಳವಾಗಿತ್ತು.

ಇದೇ ಕೊಲೆಗೆ ಕಾರಣ ಎನ್ನಲಾಗಿದೆ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಗಲಾಟೆ ನಡೆದಿದ್ದು, ಈ ಜಗಳ ತಾರಕಕ್ಕೇರಿ ತಂದೆ ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಘಟನೆ ಬಳಿಕ ಕೇಶವನ್​ ಪರಾರಿಯಾಗಿದ್ದು. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೀವು ಒಬ್ಬ ವ್ಯಕ್ತಿಯ ಮುಖ ಮಾತ್ರ ತೋರಿಸುತ್ತೀರಿ, ನಿಮ್ಮ ಕಷ್ಟಕ್ಕೆ ಅವರು ಬಂದಿದ್ದಾರೆಯೇ? | ಪತ್ರಕರ್ತರಿಗೆ ರಾಹುಲ್ ಪ್ರಶ್ನೆ

ವಂಚನೆ: ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ದೂರು ದಾಖಲು

ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ: ಕುಮಾರಸ್ವಾಮಿ

ಗುರುದ್ವಾರದಲ್ಲಿ ಧಾರ್ಮಿಕ ಧ್ವಜ ತೆಗೆಯಲು ಯತ್ನಿಸಿದ ಆರೋಪ: ವ್ಯಕ್ತಿಗೆ ಥಳಿತ

ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ: 43 ಭಾರತೀಯ ಮೀನುಗಾರರ ಬಂಧನ

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು ‘ಕನ್ನಡಿಗರ ವಿಕೃತ ಮನಸ್ಥಿತಿ’: ಉದ್ದವ್ ಠಾಕ್ರೆ

ಇತ್ತೀಚಿನ ಸುದ್ದಿ