ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ: 43 ಭಾರತೀಯ ಮೀನುಗಾರರ ಬಂಧನ - Mahanayaka
5:03 AM Thursday 23 - January 2025

ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ: 43 ಭಾರತೀಯ ಮೀನುಗಾರರ ಬಂಧನ

fish mans
19/12/2021

ಕೊಲಂಬೊ: ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 43 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, ಆರು ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀಲಂಕಾ ನೌಕಪಡೆ ಭಾನುವಾರ ತಿಳಿಸಿದೆ.

ಶನಿವಾರ ರಾತ್ರಿ ಜಾಫ್ನಾದಲ್ಲಿರುವ ಡೆಲ್ಫ್ಟ್ ದ್ವೀಪದ ಆಗ್ನೇಯ ಸಮುದ್ರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ನೌಕಪಡೆ, ಶ್ರೀಲಂಕಾ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 43 ಭಾರತೀಯ ಮೀನುಗಾರರೊಂದಿಗೆ ಆರು ಭಾರತೀಯ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀಲಂಕಾ ನೌಕಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರ ನೌಕ ಕಮಾಂಡ್‌ಗೆ ಹೊಂದಿಕೊಂಡ 4ಎಫ್ ಎ ಎಫ್ ನೌಕೆ ಮೂಲಕ ಕೋವಿಡ್ ಶಿಷ್ಠಾಚಾರ ಪಾಲನೆಯೊಂದಿಗೆ ಭಾರತೀಯ ಮೀನುಗಾರರನ್ನು ಬಂಧಿಸಿ ಕಾನೂನು ಕ್ರಮಕ್ಕಾಗಿ ಸಂಬಂಧಿತ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಪಶ್ಚಿಮ ಬಂಗಾಳ: ಬೆಳೆ ನಾಶ ಬೇಸತ್ತು ಮೂವರು ರೈತರ ಆತ್ಮಹತ್ಯೆ

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಅಕ್ಷಮ್ಯ ಅಪರಾಧ: ಬಿ.ಎಸ್‌.ಯಡಿಯೂರಪ್ಪ

ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕೂಟದ ಫಲಿತಾಂಶ

ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು ‘ಕನ್ನಡಿಗರ ವಿಕೃತ ಮನಸ್ಥಿತಿ’: ಉದ್ದವ್ ಠಾಕ್ರೆ

‘ವೀರ ಸಾವರ್ಕರ್’  ಪುಸ್ತಕ ಬಿಡುಗಡೆ: ಅಂಬೇಡ್ಕರ್ ಹಾಗೂ ಸಾವರ್ಕರ್ ನಡುವೆ ಉತ್ತಮ ಸಂಬಂಧವಿತ್ತು | ಬಿ.ಎಲ್.ಸಂತೋಷ್

ಇತ್ತೀಚಿನ ಸುದ್ದಿ