ತರಗತಿಯಲ್ಲಿಯೇ ತಾಳಿ ಕಟ್ಟಿ ಮದುವೆಯಾದ ಅಪ್ರಾಪ್ತ ವಯಸ್ಕರು! - Mahanayaka

ತರಗತಿಯಲ್ಲಿಯೇ ತಾಳಿ ಕಟ್ಟಿ ಮದುವೆಯಾದ ಅಪ್ರಾಪ್ತ ವಯಸ್ಕರು!

04/12/2020

ಹೈದರಾಬಾದ್:  ಅಪ್ರಾಪ್ತ ವಯಸ್ಸಿನ ಬಾಲಕ ಬಾಲಕಿ ತರಗತಿಯಲ್ಲಿಯೇ ವಿವಾಹವಾದ ಆಘಾತಕಾರಿ ಘಟನೆಯೊಂದು  ನಡೆದಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ  ರಾಜಮಂಡ್ರಿಯ ಪ್ಲಸ್ ಟು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರಗತಿಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕೃತ್ಯ ನಡೆಸಿದ್ದು, ಹುಡುಗನು ಹುಡುಗಿಗೆ ತರಗತಿಯಲ್ಲಿಯೇ  ಮೂರು ಗಂಟು ಹಾಕಿದ್ದಾನೆ. ಬಳಿಕ ಇಬ್ಬರೂ ಫೋಟೋಗೆ ಪೋಸ್ ನೀಡಿದ್ದಾರೆ.

ಈ ಘಟನೆ ನವೆಂಬರ್ ಆರಂಭದಲ್ಲಿ ನಡೆದಿರುವುದು ಎಂದು ಹೇಳಲಾಗಿದೆ. ಹುಡುಗಿಯ ಸಂಬಂಧಿಯೊಬ್ಬ ಈ ವಿಡಿಯೋವನ್ನು ಮಾಡಿದ್ದ. ಆದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ವೈರಲ್ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.


ವಿಡಿಯೋದಲ್ಲಿ, ಹುಡುಗ ತಾಳಿ ಕಟ್ಟಿದ ಬಳಿಕ ಹುಡುಗಿಯು, “ ಯಾರಾದರೂ ಬರುವ ಮೊದಲು ಬೇಗನೇ ಹಣೆಗೆ ಕುಂಕುಮ ಇಡುವಂತೆ ಹುಡುಗನಿಗೆ ಒತ್ತಾಯಿಸುವುದು ಕಂಡು ಬಂದಿದೆ”.  ಈ ಘಟನೆ ಇದೀಗ ಕಾಲೇಜು ಆಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಇನ್ನೂ ಈ ಪ್ರಕರಣದ ಬಗ್ಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯೂ ಎಂಟ್ರಿಯಾಗಿದ್ದು, ಈ ಇಬ್ಬರು ಅಪ್ರಾಪ್ತ ವಯಸ್ಕರಿಗೂ ಕೌನ್ಸೆಲಿಂಗ್ ನೀಡುವುದಾಗಿ ಇಲಾಖೆಯು ಹೇಳಿದೆ.

ಇತ್ತೀಚಿನ ಸುದ್ದಿ