ಜನ್ಮ ನೀಡಿದ ತಾಯಿಯ ತಲೆಗೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಪುತ್ರ! - Mahanayaka
10:23 AM Wednesday 22 - October 2025

ಜನ್ಮ ನೀಡಿದ ತಾಯಿಯ ತಲೆಗೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಪುತ್ರ!

yallappa poojary
20/03/2021

ಕಲಬುರಗಿ: ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಜನ್ಮ ನೀಡಿದ ತಾಯಿಯನ್ನೇ ಪಾಪಿ ಮಗನೋರ್ವ ಭೀಕರವಾಗಿ ಹತ್ಯೆ ಮಾಡಿದ ಘಟನೆ  ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ.

75 ವರ್ಷ ವಯಸ್ಸಿನ ಭೀಮಬಾಯಿ ಪೂಜಾರಿ ಹತ್ಯೆಯಾಗಿರುವ ವೃದ್ಧೆಯಾಗಿದ್ದು, ಇವರ ಕಿರಿಯ ಪುತ್ರ ಯಲ್ಲಪ್ಪ ಪೂಜಾರಿ ಹತ್ಯೆ ಮಾಡಿರುವ ವ್ಯಕ್ತಿಯಾಗಿದ್ದು, ಇಂದು ನಸುಕಿನ ಜಾವ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಕುಡಿಯಲು ಹಣ ಕೇಳಿದಾಗ ಭೀಮಾಬಾಯಿ ಕೊಡಲು ನಿರಾಕರಿಸಿದ್ದೇ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಕುಡಿಯಲು ಹಣ ಸಿಗಲಿಲ್ಲ ಎಂಬ ಸಿಟ್ಟಿನಲ್ಲಿ ಪುತ್ರ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ