ಬೆಳ್ತಂಗಡಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಮಹಿಳೆಯದ್ದು: ಹತ್ಯೆ ನಡೆಸಿರುವುದು ಬಹುತೇಕ ಖಚಿತ
ಬೆಳ್ತಂಗಡಿ: ನಡ ಗ್ರಾಮದ ಕೇಲ್ತಾಜೆ ಬಳಿ ಸುಟ್ಟ ರೀತಿಯಲ್ಲಿ ಪತ್ತೆಯಾದ ಮೃತದೇಹ ಮಹಿಳೆಯದೇ ಎಂಬುದು ಖಚಿತವಾಗಿದ್ದು, ಇದೊಂದು ಕೊಲೆ ಪ್ರಕರಣ ಎಂಬುದು ಬಹುತೇಕ ಖಚಿತವಾಗಿದೆ.
ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಅಲ್ಲಿಯೇ ತಜ್ಞ ವೈದ್ಯರಿಂದ ನಡೆಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕೈಬೆರಳಿನ ಉಂಗುರ, ಅರ್ದ ಸುಟ್ಟ ಬಟ್ಟೆ, ತಲೆಗೆ ಹಾಕುವ ಕ್ಲಿಪ್, ಪತ್ತೆಯಾಗಿದೆ.
30ರಿಂದ 40ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಅಧಿಕಾರಿಗಳು ಪ್ರಾಥಮಿಕ ಅಂದಾಜು ಮಾಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಎಫ್.ಎಸ್. ಎಲ್.ನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಇದೊಂದು ಮಹಿಳೆಯ ಮೃತದೇಹ ಎಂಬುದು ದೃಢ ಪಟ್ಟಿರುವ ಹಿನ್ನಲೆಯಲ್ಲಿ ಕೊಲೆ ಪ್ರಕರಣದ ಬಗ್ಗೆ ವಿವಿಧ ರೀತಿಯ ತನಿಖೆಗೆ ಪೊಲೀಸರು ಮುಂದಾಗಿ ದ್ದಾರೆ. ಸ್ಥಳೀಯರ ಮೃತದೇಹ ಇದಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಆದರೆ ಸ್ಥಳೀಯರು ಇದರ ಹಿಂದೆ ಇದ್ದಾರೆ ಎಂಬ ಅನುಮಾನವೂ ಪೊಲೀಸರದ್ದಾಗಿದೆ.
ಸ್ಥಳಕ್ಕೆ ಅಡಿಷನಲ್ ಎಸ್.ಪಿ ಕುಮಾರ್ ಚಂದ್ರ ಅವರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಸ್ಮಶಾನದಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka