ಪ್ರವಾಹದಲ್ಲಿ ಕೊಚ್ಚಿ ಹೋದ ತಂದೆ ಮಗಳು
ಹೈದರಾಬಾದ್: ಪ್ರವಾಹದ ನೀರಿನಲ್ಲಿ ತಂದೆ ಮಗಳು ಕೊಚ್ಚಿಕೊಂಡು ಹೋದ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದ್ದು, ಮದುವೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ತಂದೆ ನಾಪತ್ತೆಯಾಗಿದ್ದು ಮಗಳ ಮೃತದೇಹ ಪತ್ತೆಯಾಗಿದೆ. ಪೆನುಮುರು ಮೂಲದ ಒಂದೇ ಕುಟುಂಬದ ಐವರು ಬುಧವಾರ ಮದುವೆ ಸಮಾರಂಭದಲ್ಲಿ ಪಾಲ್ಗೊಳಲು ಕಾರಿನಲ್ಲಿ ತೆರಳಿದ್ದರು. ಕಿರಣ್ ಕುಮಾರ್ ರೆಡ್ಡಿ ಕಾರು ಚಾಲನೆ ಮಾಡುತ್ತಿದ್ದರು. ಉಳಿದಂತೆ ಪ್ರತಾಪ್, ಪತ್ನಿ ಶ್ಯಾಮಲಾ, ಮಗಳು ಸಾಯಿ ವಿನಿತಾ ಮತ್ತು ಕಸಿನ್ ಚಿಂಪಪ್ಪು ಕಾರಿನಲ್ಲಿದ್ದರು.
ಚಾಲಕ ಕಿರಣ್ ನೀರಿನ ಹರಿವನ್ನು ಗಮನಿಸದೇ ಕಾರು ಚಲಾಯಿಸಿದ್ದಾರೆ. ಇದರಿಂದಾಗಿ ಕಾರು ಹಳ್ಳದಲ್ಲಿ ಸಿಲುಕಿದೆ. ಕಾರು ಸ್ಟಾರ್ಟ್ ಆಗದಿದ್ದಾಗ ಕಿರಣ್, ಪ್ರತಾಪ್ ಮತ್ತು ಶ್ಯಮಲಾ ಎಸ್ಕೇಪ್ ಆಗಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಗಳನ್ನು ಉಳಿಸಿಕೊಳ್ಳಲು ಪ್ರತಾಪ್ ಯತ್ನಿಸಿದ್ದಾರೆ. ಆದರೆ, ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿ ನಷ್ಟದೊಂದಿಗೆ ಪ್ರಾಣಿ ಹಾನಿಯೂ ಸಂಭವಿಸಿದೆ.

Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.