ಅಕ್ಕಿರಾಜ ಖ್ಯಾತಿಯ ಆನೆ ಸಾವು: ಆನೆ ಪಳಗಿಸುವ ಎಡವಟ್ಟಿನಿಂದ ಸಾವು ಎಂಬ ಗುಮಾನಿ!? - Mahanayaka

ಅಕ್ಕಿರಾಜ ಖ್ಯಾತಿಯ ಆನೆ ಸಾವು: ಆನೆ ಪಳಗಿಸುವ ಎಡವಟ್ಟಿನಿಂದ ಸಾವು ಎಂಬ ಗುಮಾನಿ!?

elephant
01/11/2023


Provided by

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿದ್ದ ಅಕ್ಕಿರಾಜ ಅಲಿಯಾಸ್ ವಿನಾಯಕ ಎಂಬ ಆನೆ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಕೊಯಮತ್ತೂರಿನಲ್ಲಿ ಉಪಟಳ‌ ಕೊಡುತ್ತಿದ್ದ ಈ ಆನೆಯನ್ನು ಸೆರೆಹಿಡಿದು ಮಧುಮಲೈ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಅದಾದ ಬಳಿಕ, ಈ ಆನೆ ಎಲಚೆಟ್ಟಿ ಗ್ರಾಮದತ್ತ ಬಂದು ಅಕ್ಕಿ ತಿನ್ನುವುದನ್ನು ರೂಢಿಸಿಕೊಂಡಿತ್ತು.

ಕಳೆದ ಜೂ‌.ನಲ್ಲಿ ಅಂದಾಜು 30 ವರ್ಷದ ಈ ಆನೆಯನ್ನು ಎಲಚೆಟ್ಟಿ ಭಾಗದಲ್ಲಿ ಸೆರೆಹಿಡಿದು ರಾಂಪುರ ಆನೆ ಶಿಬಿರಕ್ಕೆ ಕರೆತರಲಾಗಿತ್ತು.

ಆನೆ ನೋಡಲು ಸುಂದರವಾಗಿದ್ದರಿಂದ ಹಾಗೂ ಅಗಲವಾದ ಸಮತಟ್ಟಾದ ಬೆನ್ನನ್ನು ಹೊಂದಿದ್ದರಿಂದ ದಸರಾಗೆ ಪಳಗಿಸಲಾಗುತ್ತಿತ್ತು. ಇಂದು ಬೆಳಗ್ಗೆ ತೀವ್ರ ನಿತ್ರಾಣಗೊಂಡು ಕೊನೆ ಹಸಿರು ಎಳೆದಿದೆ.

ಪಳಗಿಸುವಾಗ ಆನೆಗೆ ಆಹಾರದ ಕೊರತೆ ಉಂಟಾಗಿ ಮೃತಪಟ್ಟಿದೆ ಎಂದು ಕೆಲ ಪರಿಸರವಾದಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.ಆನೆ ಶವ ಪರೀಕ್ಷೆಯನ್ನು ಉನ್ನತ ಮಟ್ಟದಲ್ಲಿ ನಡೆಸಬೇಕು ಎಂಬ ಆಗ್ರಹ ಪರಿಸರಪ್ರಿಯರು ಹೊರಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ