ಜಿಯೋ ಟವರ್ ಏರಿದ ಕುಡುಕ: 6 ತಿಂಗಳ ಹಿಂದೆಯೂ ಟವರ್ ಏರಿದ್ದ!?

19/03/2024
ವಿಜಯಪುರ: ಯುವಕನೋರ್ವ ಅರೆಬೆತ್ತಲಾಗಿ ಜಿಯೋ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿಯಲ್ಲಿ ನಡೆದಿದೆ.
ಟವರ್ ನ ತುತ್ತತುದಿಯಲ್ಲಿ ಹೋಗಿ ನಿಂತ ಯುವಕ ಹುಚ್ಚಾಟ ಮೆರೆದಿದ್ದು, ಯುವಕ ಪಾನಮತ್ತನಾಗಿ ಟವರ್ ಏರಿದ್ದಾನೆ ಎಂದು ಹೇಳಲಾಗಿದೆ. ಯುವಕನ ಹುಚ್ಚಾಟ ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಕಳೆದ 6 ತಿಂಗಳ ಹಿಂದೆ ಸಿಂದಗಿ ತಾಲೂಕಿನಲ್ಲಿ ಎರಡು ಬಾರಿ ಟವರ್ ಏರಿದ ಘಟನೆ ನಡೆದಿತ್ತು. ಆತನೇ ಮತ್ತೆ ಇಲ್ಲಿ ಟವರ್ ಏರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಟವರ್ ಏರಿದ ವ್ಯಕ್ತಿಯನ್ನು ಇಳಿಸಲು ಅಗ್ನಿಶಾಮಕದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth