ಸಿಗ್ನಲ್ ನಲ್ಲಿ ಯುವತಿಯ ಬಟ್ಟೆ ಎಳೆದಾಡಿದ ಕಿಡಿಗೇಡಿ ಅರೆಸ್ಟ್!

ಬೆಂಗಳೂರು: ಯುವತಿಯ ಬಟ್ಟೆ ಎಳೆದವನನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಸೌತ್ ಎಂಡ್ ಬಳಿಯ ಡಿಸಿಪಿ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ.
ಕಳೆದ ನವೆಂಬರ್ 6 ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಸಿಗ್ನಲ್ ಬಳಿ ಯುವತಿಯೊಬ್ಬರು ಬೈಕ್ ನಿಲ್ಲಿಸಿದ್ದಾಗ ಹರೀಶ್ ಎಂಬಾತ ಆಕೆಯ ಬೈಕ್ ನ ಪಕ್ಕದಲ್ಲಿ ನಿಲ್ಲಿಸಿದ್ದ. ಸಿಗ್ನಲ್ ಬಿಟ್ಟ ವೇಳೆ ಪರಸ್ಪರ ಬೈಕ್ ಸಣ್ಣದಾಗಿ ಟಚ್ ಆಗಿತ್ತಷ್ಟೇ. ಮುಂದೆ ಹೋಗ್ತಿದ್ದ ಯುವತಿಯ ಬೈಕ್ ಅಡ್ಡಗಟ್ಟಿದ ಬೈಕ್ ಸವಾರ ಹರೀಶ್, ಯುವತಿಯ ಬಟ್ಟೆ ಎಳೆದಾಡಿ ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ.
ಡಿಸಿಪಿ ಕಚೇರಿ ಮುಂದೆಯೇ ಯುವತಿಯ ಬಟ್ಟೆ ಎಳೆದಾಡಿದ್ದು ವಿಚಾರ ತಿಳಿದ ಜಯನಗರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ದೂರು ದಾಖಲಿಸಿದ್ದಾರೆ. ಆದರೆ ಆರೋಪಿ ಯಾರು, ಹೇಗಿದ್ದ ಯಾವ ಕಡೆ ಹೋದಅನ್ನುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಡಿಸಿಪಿ ಕಛೇರಿಯ ಮುಂಭಾಗದಲ್ಲಿ ನಡೆದ ಘಟನೆಯನ್ನು ಪೊಲೀಸರು ಸುಮಾರು 500 ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಬಿನ್ನಿಪೇಟೆಯಲ್ಲಿ ಹರೀಶ್ ಮನೆಯನ್ನು ಪತ್ತೆ ಮಾಡಿ ಆರೋಪಿ ಹರೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ.