ಬಿಸಿಲಿನ ತಾಪ ಸಹಿಸಲಾಗದೇ ಮರದಿಂದ ಕೆಳಗೆ ಬಿದ್ದ ಕೋತಿ! - Mahanayaka
11:11 AM Wednesday 29 - October 2025

ಬಿಸಿಲಿನ ತಾಪ ಸಹಿಸಲಾಗದೇ ಮರದಿಂದ ಕೆಳಗೆ ಬಿದ್ದ ಕೋತಿ!

ghaziabad
02/06/2024

ಗಾಜಿಯಾಬಾದ್​:  ಬಿಸಿಲಿನ ಬೇಗೆ ತಾಳಲಾರದೇ ಕೋತಿಯೊಂದು ಮರದಿಂದ ಕೆಳಗೆ ಬಿದ್ದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದ್ದು, ನೆಲಕ್ಕೆ ಬಿದ್ದ ಕೋತಿಗೆ ಸಾರ್ವಜನಿಕರು ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮರದಲ್ಲಿದ್ದ ಕೋತಿ ಬಿಸಿಲಿನ ತಾಪಕ್ಕೆ ನಿರ್ಜಲೀಕರಣದಿಂದ ಬಳಲಿ ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ.  ಇದನ್ನೂ ನೋಡಿದ ಸ್ಥಳೀಯರು ಕೂಡಲೇ ಅದಕ್ಕೆ ತಣ್ಣೀರಿನಿಂದ ಸ್ನಾನ ಮಾಡಿಸಿ ಹಾರೈಕೆ ಮಾಡುತ್ತಾರೆ. ಬಳಿಕ ಅದಕ್ಕೆ ORS (Oral Rehydration Solution) ಕುಡಿಸಿ ನಿರ್ಜಲಿಕರಣದಿಂದ ಬಳಲಿದ್ದ ಕೋತಿಯನ್ನು ಆರೈಕೆ ಮಾಡಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಮಳೆ ಸುರಿಯುತ್ತಿದ್ದರು ತಾಪಮಾನ ಹೆಚ್ಚಳದಿಂದಾಗಿ ಜನ ತೀವ್ರವಾಗಿ ಬಳಲಿದ್ದಾರೆ. ಉತ್ತರ ಭಾರತದಲ್ಲಿ ತಾಪಮಾನ ಏರಿಕೆಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಪ್ರಾಣಿಗಳು ಕೂಡ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದು, ನೀರಿಲ್ಲದೇ ಕಂಗಾಲಾಗಿದೆ. ಅದರ ತೀವ್ರತೆ ಎಷ್ಟಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ