ಮನೆಯ ಬಳಿಗೆ ಬಂದ ಕಾಳಿಂಗ ಸರ್ಪ! - Mahanayaka
7:58 AM Wednesday 27 - August 2025

ಮನೆಯ ಬಳಿಗೆ ಬಂದ ಕಾಳಿಂಗ ಸರ್ಪ!

king cobra
09/10/2024


Provided by

ಕೊಟ್ಟಿಗೆಹಾರ: ಬೆಟ್ಟಗೆರೆಯ ಸಮೀಪದ ಕಾಫಿ ತೋಟದ ಹತ್ತಿರದ ಮನೆಯ ಬಳಿ ಇದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು.

ಬೆಟ್ಟಗೆರೆಯ  ಧರಣೇಂದ್ರ ಜೈನ್ ಅವರ ಮನೆಯ ಸಮೀಪ 12ಅಡಿ ಉದ್ದದ ಕಾಳಿಂಗ ಸರ್ಪವು ಮನೆಯ ಬಳಿ ಕಾಣಿಸಿಕೊಂಡು ಮನೆಯವರು ಭಯಭೀತರಾಗಿದ್ದರು.

ಬಣಕಲ್ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಅವರಿಗೆ ಕರೆ ಮಾಡಿ ಕಾಳಿಂಗಸರ್ಪ ಇರುವ  ಬಗ್ಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಆರೀಫ್ ಕಾಳಿಂಗ ಸರ್ಪವನ್ನು ಹರಸಾಹಸ ಪಟ್ಟು ಹಿಡಿದು ಚಾರ್ಮಾಡಿ ಘಾಟ್ ಸುರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ್, ಸಿಬ್ಬಂದಿ ಮೊಹಸಿನ್ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ