ಆರ್ ಎಸ್ ಎಸ್ ಪಥಸಂಚಲನಕ್ಕೆ ಮತ್ತೆ ಎದುರಾಯ್ತು ಸಮಸ್ಯೆ: ಮತ್ತೊಂದು ಸಂಘಟನೆ ಎಂಟ್ರಿ! - Mahanayaka
9:56 PM Wednesday 22 - October 2025

ಆರ್ ಎಸ್ ಎಸ್ ಪಥಸಂಚಲನಕ್ಕೆ ಮತ್ತೆ ಎದುರಾಯ್ತು ಸಮಸ್ಯೆ: ಮತ್ತೊಂದು ಸಂಘಟನೆ ಎಂಟ್ರಿ!

rss
22/10/2025

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ ಎಸ್ ಎಸ್ ಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ನವೆಂಬರ್ 2 ರಂದು ನಾವೂ ಎಸ್ ​​​ಟಿ ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡುವುದಾಗಿ ಕುರುಬ ಸಮಾಜದಿಂದ ಅರ್ಜಿ ಸಲ್ಲಿಸಲಾಗಿದೆ.

ಗೊಂಡ ಕುರುಬ ಸಮಾಜ ಎಸ್ ​​ಟಿಗೆ ಸೇರ್ಪಡೆ ಆಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲು ಸಜ್ಜಾಗಿದೆ. ಐದು ಸಾವಿರಕ್ಕೂ ಹೆಚ್ಚಿನ ಜನ ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈಗಾಗಲೇ ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ನೀಡದಂತೆ ವಿವಿಧ ದಲಿತ ಸಂಘಟನೆಗಳು  ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಲಾಠಿ. ಖಡ್ಗ ಇನ್ನಿತರ ವಸ್ತು ಪ್ರದರ್ಶಿಸಿ ಪಥಸಂಚಲನ ಮಾಡುವ ಉದ್ದೇಶ ಧರ್ಮ ರಕ್ಷಣೆಯಾಗಿದ್ದು, ಇದು ಉಗ್ರವಾದಕ್ಕೆ ಬೆಳವಣಿಗೆ ನೀಡುತ್ತದೆ ಎಂದು ದಲಿತ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಸದ್ಯ ಈ ಬಾರಿಯಾದರೂ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅವಕಾಶ ಸಿಗುತ್ತಾ, ಜಿಲ್ಲಾಡಳಿತ ಮತ್ತು ಕೋರ್ಟ್ ನ ನಡೆ ಇದೀಗ ಕುತೂಹಲ ಕೆರಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ