ಕನ್ನಂಬಾಡಿಲೂ ನೀರಿಲ್ಲ-ಕಾಡಲ್ಲೂ ನೀರಿಲ್ಲ: ರಸ್ತೆ ಬದಿ ನಿಂತಿದ್ದ ನೀರು ಕುಡಿದ ಆನೆ!! - Mahanayaka

ಕನ್ನಂಬಾಡಿಲೂ ನೀರಿಲ್ಲ–ಕಾಡಲ್ಲೂ ನೀರಿಲ್ಲ: ರಸ್ತೆ ಬದಿ ನಿಂತಿದ್ದ ನೀರು ಕುಡಿದ ಆನೆ!!

chamarajanagara
06/10/2023


Provided by

ಚಾಮರಾಜನಗರ: ನೀರಿನ ಅಭಾವ ಕೇವಲ ನಾಡಲ್ಲಿ ಮಾತ್ರವಲ್ಲದೇ ಕಾಡಲ್ಲೂ ಕಾಣಿಸಿಕೊಂಡಿದೆ ಎಂಬುದಕ್ಕೆ ರಸ್ತೆಬದಿ ನಿಂತಿದ್ದ ನೀರು ಕುಡಿದ ಈ ಆನೆಯೇ ಸಾಕ್ಷಿ.‌

ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಜಮೀನಿನಲ್ಲಿ ಹಾಕಿರುವ ಫೈರುಗಳು ಒಣಗಿರುವುದು ಒಂದೆಡೆಯಾದರೆ, ಅರಣ್ಯದಲ್ಲಿ ಕೆರೆಕಟ್ಟೆಗಳು ಖಾಲಿಯಾಗಿರುವುದರಿಂದ ವನ್ಯ ಪ್ರಾಣಿಗಳು ನಾಡಿನತ್ತ ಬರಲು ಪ್ರಾರಂಭಿಸಿದೆ.

ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಕಡೆಗೆ ತೆರಳುವ ರಸ್ತೆಯಲ್ಲಿ  ಕಾಡಿನಿಂದ ಹೊರಬಂದ ಆನೆಯೊಂದು ರಸ್ತೆಬದಿ ನಿಂತಿದ್ದ ಹಳ್ಳದ ನೀರನ್ನು ಕುಡಿದು ದಣಿವಾರಿಸಿಕೊಂಡಿದೆ.  ಆನೆ ನೀರು ಕುಡಿಯುವುದನ್ನು ವಾಹ ಸವಾರರೋರ್ವ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಇತ್ತೀಚಿನ ಸುದ್ದಿ