ಅಂಗನವಾಡಿಗೆ ನುಗ್ಗಿ ಆಮ್ಲೇಟ್ ಮಾಡಿ ತಿಂದ ಕಳ್ಳರು!

ಪುತ್ತೂರು: ಅಂಗನವಾಡಿಗೆ ನುಗ್ಗಿದ ಕಳ್ಳರು ಮಕ್ಕಳಿಗೆ ನೀಡಲು ದಾಸ್ತಾನು ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ ಎಂದಿನಂತೆ ಕರ್ತವ್ಯಕ್ಕೆ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಮಕ್ಕಳಿಗೆ ನೀಡಲು ಅಡುಗೆ ಕೋಣೆಯಲ್ಲಿ ದಾಸ್ತಾನಿಟ್ಟಿದ್ದ ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಗ್ಯಾಸ್ ಸ್ಟೌ ಮೇಲೆ ಬಾಣಲೆ ಇಟ್ಟ ಆಮ್ಲೇಟ್ ಮಾಡಿದ್ದು, ಆಮ್ಲೇಟ್ ನ ತುಂಡು ಬಾಣಲೆಯಲ್ಲಿ ಪತ್ತೆಯಾಗಿದೆ.
ವಾರದ ಹಿಂದೆಯಷ್ಟೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸೊತ್ತುಗಳನ್ನು ನಾಶ ಮಾಡಿ ಗಲೀಜು ಮಾಡಿ ಹಾಕಿದ್ದರು. ಇದೀಗ ಅಂಗನವಾಡಿ ಕೇಂದ್ರಕ್ಕೂ ನುಗ್ಗಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth