ಬ್ಯಾಗ್ ಕದಿಯಲು ಬಿಡದ ಯುವಕನನ್ನು ಚೂರಿಯಿಂದ ಇರಿದು ಕೊಂದ ಕಳ್ಳರು!

ದೆಹಲಿ: ಬ್ಯಾಗ್ ಕಳ್ಳವು ಮಾಡಲು ಸಾಧ್ಯವಾಗದ ಕಾರಣ ಕೋಪಗೊಂಡ ಕಳ್ಳರು ಯುವಕನೋರ್ವವನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.
ನರೇಂದ್ರ(32) ಹತ್ಯೆಗೀಡಾದ ಯುವಕನಾಗಿದ್ದಾನೆ. ಈತ ತನ್ನ ಸ್ನೇಹಿತನೊಂದಿಗೆ ಪಾರ್ಕ್ ವೊಂದರಲ್ಲಿ ಮದ್ಯ ಸೇವಿಸುತ್ತಾ ಕುಳಿತಿದ್ದ ಎನ್ನಲಾಗಿದೆ. ಇದೇ ವೇಳೆ ಆತನ ಬ್ಯಾಗ್ ಕಳವು ಮಾಡಲು ನಾಲ್ವರು ಕಳ್ಳರು ಹೊಂಚು ಹಾಕಿದ್ದಾರೆ.
ಕಳ್ಳರು ಬ್ಯಾಗ್ ಕಳವು ಮಾಡಲು ಯತ್ನಿಸಿದಾಗ ನರೇಂದ್ರ ಮತ್ತು ಆತನ ಸ್ನೇಹಿತ ಪ್ರತಿರೋಧ ತೋರಿದ್ದು, ಇದರಿಂದ ಕೋಪಗೊಂಡ ಕಳ್ಳರು ಚೂರಿಯಿಂದ ಅಮಾನವೀಯವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ವೇಳೆ ತೀವ್ರ ಗಾಯಗೊಂಡ ನರೇಂದ್ರನನ್ನು ತಕ್ಷಣವೇ ಹತ್ತಿರದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿದ ಪೋಲಿಸರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth