ತಿರುಪತಿ ತಿಮ್ಮಪ್ಪನ ಲಡ್ಡು ಬಹಳ ಇಷ್ಟ | ಆದ್ರೆ ಸುದ್ದಿ ಕೇಳಿದ ನಂತರ…!: ಭಕ್ತರು ಹೇಳಿದ್ದೇನು? - Mahanayaka

ತಿರುಪತಿ ತಿಮ್ಮಪ್ಪನ ಲಡ್ಡು ಬಹಳ ಇಷ್ಟ | ಆದ್ರೆ ಸುದ್ದಿ ಕೇಳಿದ ನಂತರ…!: ಭಕ್ತರು ಹೇಳಿದ್ದೇನು?

tirupati bhakth
20/09/2024


Provided by

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಲಡ್ಡು ಪ್ರಸಾದ ಅಂದ್ರೆ ಬಹಳ ಇಷ್ಟ.  ತುಪ್ಪದಲ್ಲಿ ತಯಾರಾಗುವ ಇಲ್ಲಿನ ಲಡ್ಡುಗಳು ಭಾರೀ ಜನಪ್ರಿಯ ಕೂಡ ಆಗಿವೆ. ಆದ್ರೆ ಇದೀಗ ಪ್ರಾಣಿಗಳ ಕೊಬ್ಬು ಬಳಸಿ ಲಡ್ಡು ತಯಾರಿಸಲಾಗುತ್ತಿದೆ ಎನ್ನುವ ಆರೋಪದ ಬೆನ್ನಲ್ಲೇ ಸಸ್ಯಾಹಾರಿ ಭಕ್ತರಿಗೆ ಶಾಕ್ ಆಗಿದೆ.

ಈ ವಿವಾದದ ಬಳಿಕ ತಿಮ್ಮಪ್ಪನ ಭಕ್ತರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಿಮ್ಮಪ್ಪನ ಭಕ್ತೆಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿ, ಇವತ್ತು ತುಂಬಾ ಜನ ಇದ್ರೂ, ದರ್ಶನ ಚೆನ್ನಾಗಿ ನಡೆಯಿತು. ನಮಗೂ ಲಡ್ಡು ಪ್ರಸಾದ ಸಿಕ್ಕಿದೆ ಎಂದರು.

ತಿರುಪತಿಯ ಲಡ್ಡು ಅಂದ್ರೆ ನಮಗೆ ತುಂಬಾ ಇಷ್ಟ ಆದ್ರೆ ಲಡ್ಡು ಬಗ್ಗೆ ಸುದ್ದಿ ಕೇಳಿ ನಮಗೆ ಶಾಕ್ ಆಗಿದೆ. ಸರ್ಕಾರ ತನಿಖೆ ಮಾಡುವ ನಂಬಿಕೆ ಇದೆ ಅಂತ ಹೇಳಿದರು.

ಹೈದರಾಬಾದ್ ಮೂಲದ ಭಕ್ತರೊಬ್ಬರು ಈ ಬಗ್ಗೆ ಮಾತನಾಡಿ, ಲಡ್ಡು ಬಗ್ಗೆ ಕೆಲವು ದಿನಗಳಿಂದ ಸುದ್ದಿಯಾಗುತ್ತಿರುವುದನ್ನು ನೋಡಿದ್ದೇನೆ. ಹಿಂದಿನ ಸರ್ಕಾರ ಇದ್ದಾಗ  ಪ್ರಸಾದಕ್ಕೆ ಪೂರೈಕೆಯಾದ ತುಪ್ಪ ಕಳಪೆ ಎಂದು ಕೇಳಿದ್ದೇವೆ. ಚಂದ್ರಬಾಬು ನಾಯ್ಡು ಅದನ್ನೆಲ್ಲ ಸರಿಪಡಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.

ತಿರುಪತಿ ತಿಮ್ಮಪ್ಪನ ಕ್ಷೇತ್ರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಇಂತಹ ಜಾಗದಲ್ಲಿ ಈ ರೀತಿಯ ಕೆಟ್ಟ ಘಟನೆ ಆಗಬಾರದು ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ