ಇದು ಸರಣಿ ಸ್ಫೋಟದ ಮುನ್ಸೂಚನೆ ಅನ್ಸುತ್ತೆ: ಮಾಜಿ ಶಾಸಕ ಸಿ.ಟಿ.ರವಿ - Mahanayaka

ಇದು ಸರಣಿ ಸ್ಫೋಟದ ಮುನ್ಸೂಚನೆ ಅನ್ಸುತ್ತೆ: ಮಾಜಿ ಶಾಸಕ ಸಿ.ಟಿ.ರವಿ

c t ravi
02/03/2024


Provided by

ಚಿಕ್ಕಮಗಳೂರು : ಭಯೋತ್ಪಾದಕರು ಕರ್ನಾಟಕವನ್ನ ಸ್ಲೀಪರ್ ಸೆಲ್ ಮಾಡ್ಕೊಂಡಿದ್ದು ಹೊಸದಲ್ಲ,  ಕರ್ನಾಟಕವನ್ನ ಟ್ರೈನಿಂಗ್ ಸೆಂಟರ್ ಆಗಿ ಬಳಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಿಗೂಢ ವಸ್ತು ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು,  ಈಗ ಉತ್ತರದಲ್ಲಿ ಬಾಂಬ್ ಸದ್ದು ಕ್ಷೀಣವಾಗಿದೆ,  ದಕ್ಚಿಣದ ಕೇರಳ, ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದೆ.  ಬ್ರಾಂಡ್ ಬೆಂಗಳೂರಿಗೆ ಬಾಂಬ್ ಬೆದರಿಕೆ ಎದುರಾಗಿದೆ. ನಿನ್ನೆ ನಡೆದ ಘಟನೆ ಪರೀಕ್ಷಾರ್ಥ ಸ್ಫೋಟ ಮಾಡಿರುವ ಸಂಶಯ ಕಾಡುತ್ತಿದೆ ಎಂದು ಅವರು ಹೇಳಿದರು.

ಇದು ಸರಣಿ ಸ್ಫೋಟದ ಮುನ್ಸೂಚನೆ ಅನ್ಸುತ್ತೆ,  ಪರೀಕ್ಷಾರ್ಥ ಪ್ರಯೋಗವಾಗಿ ಸ್ಫೋಟ ಮಾಡಿರಬಹುದೆಂಬ ಸಂಶಯ ಮೂಡಿದೆ.  ಸರ್ಕಾರ ಇಡೀ ಪ್ರಕರಣವನ್ನ ಎನ್.ಐ.ಎ.ಗೆ ವಹಿಸುವಂತೆ  ಅವರು ಆಗ್ರಹಿಸಿದರು.

ಕರ್ನಾಟಕವನ್ನ ಸ್ಲೀಪರ್ ಸೆಲ್ ಹಾಗೂ ಟ್ರೈನಿಂಗ್ ಸೆಂಟರ್ ಆಗಿ ಬಳಸಿಕೊಂಡಿರೋ ಮಾಹಿತಿ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ