ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್ ಹೇಳಿದಿಷ್ಟು..! - Mahanayaka

ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್ ಹೇಳಿದಿಷ್ಟು..!

gautam gambhir
10/07/2024


Provided by

ನವದೆಹಲಿ: ಟೀಮ್​​ ಇಂಡಿಯಾದ ಮುಖ್ಯ ಕೋಚ್​ ಬಗ್ಗೆ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿತ್ತು.  ಇದರ ಬೆನ್ನಲ್ಲೇ ಇದೀಗ ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.

ಮಂಡಳಿಯ ಕಾರ್ಯದರ್ಶಿ ಜಯ್​ ಷಾ ಅವರು ನಿನ್ನೆ ಕೋಚ್ ಆಗಿ ಗೌತಮ್ ಗಂಭೀರ್ ಅವರ ಹೆಸರನ್ನು ಅಧಿಕೃತ ಹೇಳಿಕೆ ನೀಡಿದ್ದಾರೆ.

ಕೋಚ್ ಆದ ಬೆನ್ನಲ್ಲೇ ಪೋಸ್ಟ್ ಮಾಡಿರುವ ಗಂಭೀರ್,  ದೇಶ ಸೇವೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ಎಂದಿದ್ದಾರೆ. ಟೀಮ್​ ಇಂಡಿಯಾಗೆ ಮರುಪ್ರವೇಶ ಮಾಡಲು ಖುಷಿಯಾಗುತ್ತಿದೆ. ಭಾರತ ನನ್ನ ಗುರುತು. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದಕ್ಕಿಂತ ಉತ್ತಮವಾದದ್ದೇನೂ ಜೀವನದಲ್ಲಿ ಇಲ್ಲ. ಭಾರತ ತಂಡಕ್ಕೆ ಮರುಪ್ರವೇಶ ಮಾಡಿರುವುದು ನನಗೆ ಗೌರವವಾಗಿದೆ ಎಂದಿದ್ದಾರೆ.

ಟೀಮ್​ ಇಂಡಿಯಾ ಕ್ಯಾಪ್ ಧರಿಸಲು ಕಾತರದಿಂದ ಕಾಯುತ್ತಿದ್ದೇನೆ. ಆದರೆ ಕೋಚ್ ಆಗಿ ನನ್ನ ಗುರಿ ಒಂದೇ. ಪ್ರತಿ ಭಾರತೀಯರು ಹೆಮ್ಮೆ ಪಡುವಂತೆ ಮಾಡುವುದು ನನ್ನ ಗುರಿಯಾಗಿದೆ. ಮೆನ್ ಇನ್ ಬ್ಲೂ 140 ಕೋಟಿ ಜನರ ಕನಸುಗಳನ್ನು ಹೊತ್ತಿದೆ. ಆ ಕನಸುಗಳನ್ನು ನನಸು ಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ