ನಿಷೇಧಿತ ಪ್ರದೇಶ ಚಾರ್ಮಾಡಿ ಫಾಲ್ಸ್:  ಬಟ್ಟೆ ಹೊತ್ತೊಯ್ದ ಪೊಲೀಸರ ಹಿಂದೆ  ಚಡ್ಡಿಯಲ್ಲಿ ಓಡಿದ ಯುವಕರು! - Mahanayaka

ನಿಷೇಧಿತ ಪ್ರದೇಶ ಚಾರ್ಮಾಡಿ ಫಾಲ್ಸ್:  ಬಟ್ಟೆ ಹೊತ್ತೊಯ್ದ ಪೊಲೀಸರ ಹಿಂದೆ  ಚಡ್ಡಿಯಲ್ಲಿ ಓಡಿದ ಯುವಕರು!

charmadi
10/07/2024

ಚಿಕ್ಕಮಗಳೂರು:  ಸರ್… ಪ್ಲೀಸ್ ಸರ್… ಸರ್… ಪ್ಲೀಸ್… ಇನ್ನೊಂದ್ ಸಲ ಮಾಡಲ್ಲ… ಪ್ಲೀಸ್ ಬಟ್ಟೆ ಕೊಡಿ ಅಂತ ಗೋಗರೆಯುತ್ತಾ ಪ್ರವಾಸಿಗರು ಪೊಲೀಸರ ಹಿಂದೆ  ಚಡ್ಡಿಯಲ್ಲಿ ಓಡಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ನಡೆದಿದೆ.


Provided by

ಚಾರ್ಮಾಡಿ ನಿಷೇಧಿತ ಪ್ರದೇಶದಲ್ಲಿ ಬಂಡೆ ಹತ್ತಿ ಪ್ರವಾಸಿಗರು ಹುಚ್ಚಾಟ  ನಡೆಸುತ್ತಿದ್ದರು. ಈ ಪ್ರದೇಶಕ್ಕೆ ಹೋಗದಂತೆ ಪೊಲೀಸರು ಎಷ್ಟು ವಾರ್ನಿಂಗ್ ನೀಡಿದರೂ ಪ್ರವಾಸಿಗರು ಮತ್ತೆ ಮತ್ತೆ ಇಲ್ಲಿ ಹುಚ್ಚಾಟ ಮಾಡುತ್ತಲೇ ಇದ್ದಾರೆ. ಹೀಗಾಗಿ    ಜಲಪಾತದ ಬಳಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರಿಗೆ  ಪೊಲೀಸರು ಬಿಸಿ ಮುಟ್ಟಿಸಲು ಅವರ ಬಟ್ಟೆಗಳನ್ನು ಎತ್ತಿಕೊಂಡು ಹೋಗಿ ತಮ್ಮ ಗಸ್ತು ವಾಹನಕ್ಕೆ ತುಂಬಿದ್ದಾರೆ.

ಆರಂಭದಲ್ಲಿ ಪೊಲೀಸರ ಹಿಂದೆ ಬರೀ ಚಡ್ಡಿಯಲ್ಲೇ ಓಡಾಡಿದ ಪ್ರವಾಸಿಗರು ಸರ್… ಸರ್… ಬಟ್ಟೆಕೊಡಿ ಎಂದು ಬೇಡಿಕೊಂಡರು. ಆದರೆ ಪೊಲೀಸರಿ ಸತಾಯಿಸಿದಾಗ ಕೋಪಗೊಂಡು ಪೊಲೀಸರ ಜೊತೆಗೆ ಜಗಳಕ್ಕೆ ನಿಂತರು. ಈ ವೇಳೆ ಪೊಲೀಸರು ಬಟ್ಟೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಪೊಲೀಸರಿಗೆ ಆವಾಜ್ ಹಾಕಿದ್ದ ಪ್ರವಾಸಿಗ ಯುವಕರು ಬಟ್ಟೆ ಇಲ್ಲದೇ ಪೇಚಿಗೆ ಸಿಲುಕಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಖಡಕ್ ವಾರ್ನಿಂಗ್ ನೀಡಿದ ಪೊಲೀಸರು ಬಟ್ಟೆ ಕೊಟ್ಟು ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿದ್ದಾರೆ.  ಬಣಕಲ್ ಗಸ್ತು ಪೊಲೀಸರು ಚಾರ್ಮಾಡಿಯಲ್ಲಿ ಕಾರ್ಯಾಚರಣೆ  ನಡೆಸುತ್ತಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಓಡಾಡುತ್ತಿರುವ ಯುವಕರಿಗೆ ಬಿಸಿಮುಟ್ಟಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ