ಈ ಸಲ ಕಪ್ ನಮ್ಮದೆ... ಗಡಿಜಿಲ್ಲೆ ವಿದ್ಯಾರ್ಥಿಗಳು, ಶಾಸಕರ ಜೋಶ್ - Mahanayaka

ಈ ಸಲ ಕಪ್ ನಮ್ಮದೆ… ಗಡಿಜಿಲ್ಲೆ ವಿದ್ಯಾರ್ಥಿಗಳು, ಶಾಸಕರ ಜೋಶ್

worldcup
18/11/2023


Provided by

ಚಾಮರಾಜನಗರ: ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲಲಿದೆ, ಪಟಾಕಿ ಹಚ್ಚೆ ಹಚ್ತೀವಿ ಎಂದು ಚಾಮರಾಜನಗರ ವಿದ್ಯಾರ್ಥಿಗಳು ಸೆಲೆಬ್ರೇಷನ್ ಜೋಶ್‌ ನಲ್ಲಿದ್ದು ಫೈನಲ್ ಪಂದ್ಯಕ್ಕೆ ಕಾತರರಾಗಿದ್ದಾರೆ.

ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತನ್ನ ಅಜೇಯ ಓಟ ಮುಂದುವರೆಸಿ ಕಪ್ ಎತ್ತಿ ಹಿಡಿಲಿದ್ದು ಮತ್ತೊಂದು ದೀಪಾವಳಿ ಹಬ್ಬ ನಮಗೆ ಭಾನುವಾರ ಬರಲಿದೆ, ಈ ಸಲ ಕಪ್ ನಮ್ದೆ ಎಂದು ಚಾಮರಾಜನಗರದ ಜೆಎಸ್ ಎಸ್ ನರ್ಸಿಂಗ್ ವಿದ್ಯಾರ್ಥಿಗಳು,  ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಟೀಂ ಇಂಡಿಯಾ ಗೆ ವಿಶ್ ಮಾಡಿದ್ದಾರೆ‌.

ರನ್ ಮೆಷಿನ್ ಕೊಹ್ಲಿ ಮತ್ತೊಂದು ಶತಕ ಬಾರಿಸಬೇಕು, ಕನ್ನಡಿಗ ರಾಹುಲ್ ಫೈನಲ್ ಪಂದ್ಯದಲ್ಲಿ ಮಿಂಚಬೇಕು, ತವರಿನಲ್ಲಿ ಭಾರತ ಕಪ್ ಎತ್ತಿ ಹಿಡಿಯಲಿದೆ ಎಂದು ವಿದ್ಯಾರ್ಥಿಗಳು ವಿಶ್ವಾಸ ಹೊರಹಾಕಿದ್ದಾರೆ.

ಇನ್ನು, ಹನೂರು ಶಾಸಕ ಮಂಜುನಾಥ್ ಕೂಡ ಟೀಂ ಇಂಡಿಯಾಗೆ ವಿಶ್ ಮಾಡಿದ್ದು ,  ಐಪಿಎಲ್ ಬಂದ ಬಳಿಕ ಪ್ರತಿಭಾವಂತರಿಗೆ ಅವಕಾಶ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಶ್ವಕಪ್ ನಲ್ಲಿ ಭಾರತ ಗೆದ್ದೇ ಗೆಲ್ಲಲ್ಲಿದೆ, ಎಲ್ಲಾ ಕ್ರಿಕೆಟಿಗರು ಗೆಲುವಿನ ಉತ್ಸಾಹದಲ್ಲಿದ್ದಾರೆ, ಐಪಿಎಲ್ ಬಂದ ನಂತರ ಪ್ರತಿಭಾವಂತರಿಗೆ ಅವಕಾಶ ಸಿಕ್ಕಿದೆ,  ಉತ್ತಮ ಆಟಗಾರರಿಂದ ಟೀಂ ಇಂಡಿಯಾ ರೂಪುಗೊಂಡಿದೆ, ವಿಶ್ವಕಪ್ ಗೆಲ್ಲುವ ಎಲ್ಲಾ ಲಕ್ಷಣವೂ ಈ ಬಾರಿ ಭಾರತಕ್ಕಿದೆ ಎಂದರು.

ಈಗಾಗಲೇ ಬಲಿಷ್ಠ ತಂಡಗಳನ್ನು ಸೋಲಿಸಿಕೊಂಡು ಭಾರತ ಬಂದಿದ್ದು ಆಸ್ಟ್ರೇಲಿಯಾವನ್ನು ಕೂಡ ಸೋಲಿಸಲಿದೆ, ಇಡೀ ಪ್ರಪಂಚದಲ್ಲಿ ಭಾರತ ಕ್ರಿಕೆಟ್ ತಂಡ ಹೆಸರು ಮಾಡಲಿದೆ ಎಂದು ಶಾಸಕ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್ ಕೂಡ ಟೀಂ ಇಂಡಿಯಾ ಈ ಬಾರಿ ಕಪ್ ಎತ್ತಿ ಹಿಡಿಯಲಿದೆ, ಎಲ್ಲಾ ಆಟಗಾರರು ಒಳ್ಳೆಯ ಫಾರ್ಮ್ ನಲ್ಲಿದ್ದು ಈ ಬಾರಿ ವಿಶ್ವಕಪ್ ಗೆಲ್ಲುವ ಭರವಸೆ ನನಗಿದೆ ಎಂದರು.

ಇತ್ತೀಚಿನ ಸುದ್ದಿ