ಇನ್ನು ಮುಂದೆ ರೈಲಿನಲ್ಲಿ ಈ ಕೆಲಸ ಮಾಡುವಂತಿಲ್ಲ, ಮಾಡಿದ್ರೆ ದಂಡ ಖಚಿತ! - Mahanayaka

ಇನ್ನು ಮುಂದೆ ರೈಲಿನಲ್ಲಿ ಈ ಕೆಲಸ ಮಾಡುವಂತಿಲ್ಲ, ಮಾಡಿದ್ರೆ ದಂಡ ಖಚಿತ!

raliway
19/02/2024


Provided by

ಪ್ರಯಾಣಿಕರು ರೈಲಿನಲ್ಲಿ ರಾತ್ರಿ ವೇಳೆ ಯಾವುದೇ ಅಡಚಣೆಗಳಿಲ್ಲದೇ ಆರಾಮದಾಯಕವಾಗಿ ಪ್ರಯಾಣಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಹಲವು ಮಾರ್ಗಸೂಚಿಗಳನ್ನು ಸೂಚಿಸಿದೆ.

ರಾತ್ರಿ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ನಿದ್ರೆಗೆ ತೊಂದರೆಯಾಗದಂತೆ ಇರಲು ಭಾರತೀಯ ರೈಲ್ವೇಯು ಹಲವಾರು ನಿಯಮಾವಳಿಗಳನ್ನು ರೂಪಿಸಿದೆ.

ಮಖ್ಯವಾಗಿ ರೈಲಿನಲ್ಲಿ ಸಂಚಾರಿಸುವಾಗ ಧ್ವನಿವರ್ಧಕಗಳ ಮೂಲಕ ಸಂಗೀತ ನುಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸಂಗೀತವನ್ನು ಕೇಳಲು ಬಯಸುವ ಪ್ರಯಾಣಿಕರು ಇಯರ್ ಫೋನ್ ಗಳನ್ನು ಬಳಸಬೇಕು ಅಥವಾ ವಾಲ್ಯೂಮ್ ಅನ್ನು ಕಡಿಮೆ ಮಾಡಬೇಕು.

ಪ್ರಯಾಣಿಕರು ತಾವು ಕಾಯ್ದಿರಿಸದ ಸೀಟ್ ,ಕೋಚ್ ಗಳಲ್ಲಿ ಫೋನ್ ಗಳಲ್ಲಿ ಅಥವಾ ಸಹ ಪ್ರಯಾಣಿಕರಲ್ಲಿ ಜೋರಾಗಿ ಮಾತನಾಡುವುದನ್ನುನೀಷೆಧಿಸಿದೆ.

ರೈಲಿನಲ್ಲಿ ಅಳವಡಿಸಲಾದ ಲೈಟ್ ಗಳನ್ನು ರಾತ್ರಿ10 ಗಂಟೆಯ ನಂತರ ಆಫ್ ಮಾಡಬೇಕು.

ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಮಾಡುವಂತೆ ಭಾರತೀಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರೈಲ್ವೇಯು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಮತ್ತು ಎಲ್ಲರಿಗೂ ನೆಮ್ಮದಿಯಾಗಿ ಪ್ರಯಾಣಸಲು ಒತ್ತು ನೀಡಿದೆ. ನಿಯಮಗಳನ್ನು ಪಾಲಿಸದೆ ಇರುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ರೈಲಿನಲ್ಲಿ ಟಿಕೆಟ್ ಪರೀಕ್ಷಕರು (ಟಿಟಿಇ) ಮತ್ತು ಇತರ ರೈಲ್ವೇ ಸಿಬ್ಬಂದಿ ರಾತ್ರಿ ಸಮಯದಲ್ಲಿ ಜಾಗರೂಕರಾಗಿ ಪ್ರಯಾಣಿಕರಿಗೆ ಯಾವುದೇ ಅಡಚಣೆಗಳ ಆಗದಂತೆ ನಿಗಾ ವಹಿಸುತ್ತಾರೆ.

ರಾತ್ರಿ ಪ್ರಯಾಣದ ಸಮಯದಲ್ಲಿ ಯಾವುದೇ ಅನಾನುಕೂಲತೆಯನ್ನು ಎದುರಿಸುತ್ತಿರುವ ಪ್ರಯಾಣಿಕರಿಗೆ, ಸಹಾಯಕ್ಕಾಗಿ ಭಾರತೀಯ ರೈಲ್ವೇಯು TTE ಯೊಂದಿಗೆ ಸಮಸ್ಯೆಯನ್ನು ತಿಳಿಸಲು AI-ಆಧಾರಿತ ರೈಲ್ ಮಿತ್ರ ಅಪ್ಲಿಕೇಶನ್ ಅನ್ನು ಬಳಸಲು ಸಲಹೆ ನೀಡಲಾಗಿದೆ.

ಈ ಅಪ್ಲಿಕೇಶನ್ ರೈಲು ವೇಳಾಪಟ್ಟಿಗಳನ್ನು ಪರಿಶೀಲಿಸುವುದು, PNR ಸ್ಥಿತಿ, ಲೈವ್ ರೈಲು ಚಾಲನೆಯ ಸ್ಥಿತಿ, ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡುವುದು, ದೂರುಗಳನ್ನು ನೋಂದಾಯಿಸುವುದು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಂತೆ ಹಲವಾರು ಸೇವೆಗಳನ್ನು ಒದಗಿಸುತ್ತದೆ.

ಇತ್ತೀಚಿನ ಸುದ್ದಿ