'ಧರ್ಮವನ್ನು ತೋರಿಸಿ ಓಟು ಕೇಳುವ ಪಾರ್ಟಿ ಬಲು ಡೇಂಜರ್': ನಟ ರಿತೇಶ್ ದೇಶಮುಖ್ ಹೇಳಿಕೆ - Mahanayaka
2:05 AM Wednesday 17 - September 2025

‘ಧರ್ಮವನ್ನು ತೋರಿಸಿ ಓಟು ಕೇಳುವ ಪಾರ್ಟಿ ಬಲು ಡೇಂಜರ್’: ನಟ ರಿತೇಶ್ ದೇಶಮುಖ್ ಹೇಳಿಕೆ

13/11/2024

‘ನಮ್ಮ ಧರ್ಮ ಅಪಾಯದಲ್ಲಿದೆ ಅದನ್ನು ರಕ್ಷಿಸಬೇಕು’ ಅಂತ ಹೇಳಿಕೊಂಡು ಯಾರಾದರೂ ನಿಮ್ಮ ಬಳಿಗೆ ಬಂದರೆ, ಅದನ್ನು ನಾವು ನೋಡಿಕೊಳ್ಳುತ್ತೇವೆ, ನೀವು ಅಭಿವೃದ್ಧಿಯ ಬಗ್ಗೆ ಹೇಳಿ ಎಂದು ಮರುತ್ತರ ನೀಡಬೇಕು ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್ ಹೇಳಿದ್ದಾರೆ. ಧರ್ಮವನ್ನು ತೋರಿಸಿ ಓಟು ಕೇಳುವ ಪಾರ್ಟಿಯು ನಮ್ಮನ್ನು ನಾಶದೆಡೆಗೆ ಕೊಂಡೊಯ್ಯುತ್ತಿದೆ ಎಂದು ಖಾರವಾಗಿ ಹೇಳಿಕೆ ನೀಡಿದ್ದಾರೆ.


Provided by

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವರ ಸಹೋದರ ಧೀರಜ್ ದೇಶ್ ಮುಖ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಲಾತೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ನಮ್ಮ ಧರ್ಮ ಅಪಾಯದಲ್ಲಿದೆ ಎಂದು ಯಾವ ಪಕ್ಷ ಹೇಳುತ್ತೋ ಆ ಪಾರ್ಟಿ ನಿಜವಾಗಿಯೂ ಅಪಾಯಕಾರಿಯಾಗಿದೆ. ಭಗವಾನ್ ಕೃಷ್ಣನು ಕರ್ಮವೇ ಧರ್ಮ ಎಂದಿದ್ದಾನೆ. ಯಾರು ಕರ್ಮವನ್ನು ಲೋಪವಿಲ್ಲದೆ ಹೃದಯದಿಂದ ಮಾಡುತ್ತಾರೋ ಅಂಥವರು ಧರ್ಮವನ್ನು ಅನುಸರಿಸುತ್ತಿದ್ದಾರೆ. ಅಂತಹವರಿಗೆ ಧರ್ಮದೊಂದಿಗೆ ಸಹಜವಾಗಿ ಅಭಿಮಾನವಿದೆ. ಸ್ವಯಂ ಕರ್ಮ ಎಸಗದವರಿಗೆ ಧರ್ಮ ಅಪಾಯದಲ್ಲಿದೆ ಅನ್ನುವ ಮಾತುಗಳ ಅಗತ್ಯ ಇದೆ ಎಂದವರು ಹೇಳಿದ್ದಾರೆ.

2019ರ ಅಸೆಂಬ್ಲಿ ಚುನಾವಣೆಯಲ್ಲಿ ಒಂದು ಲಕ್ಷದ 21 ಸಾವಿರ ಮತಗಳಿಂದ ಧೀರಜ್ ದೇಶ್ ಮುಖ್ ವಿಜಯಿಯಾಗಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ