ಹನಿ ಹುಡುಕಿಕೊಂಡು ಹೋದವರು ಟ್ರ್ಯಾಪ್ ಆಗ್ತಾರೆ: ಕೆ.ಎನ್.ರಾಜಣ್ಣಗೆ ಗುಬ್ಬಿ ಶ್ರೀನಿವಾಸ್ ಟಾಂಗ್ - Mahanayaka

ಹನಿ ಹುಡುಕಿಕೊಂಡು ಹೋದವರು ಟ್ರ್ಯಾಪ್ ಆಗ್ತಾರೆ: ಕೆ.ಎನ್.ರಾಜಣ್ಣಗೆ ಗುಬ್ಬಿ ಶ್ರೀನಿವಾಸ್ ಟಾಂಗ್

gubbi shrinivas
24/03/2025

ತುಮಕೂರು: ಹನಿ ಹುಡುಕಿಕೊಂಡು ಹೋದವರು ಟ್ರ್ಯಾಪ್ ಆಗ್ತಾರೆ,  ಸುಮ್ಮನೆ ಇದ್ರೆ ಯಾರು ಬಂದು ಟ್ರ್ಯಾಪ್ ಮಾಡ್ತಾರಾ?  ಒಟ್ಟಾರೆ ಹನಿ‌ ಹುಡುಕಿಕೊಂಡು ಹೋದರೆ ಟ್ರ್ಯಾಪ್ ಆಗೋದು ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್  ಕೆ.ಎನ್.ರಾಜಣ್ಣಗೆ ಟಾಂಗ್ ನೀಡಿದ್ದಾರೆ.


Provided by

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,   ಅವರ ಮೇಲೆ ಹನಿಟ್ರ್ಯಾಪ್  ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ. ಅವರು ಹೋಗಿ ದೂರು ಕೊಡಬೇಕು, ತನಿಖೆ ಆಗುತ್ತೆ. 40–50 ಜನರು ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ. ಅವರೂ ದೂರು ಕೊಡಲಿ ಎಂದರು.

ಇಂತಹ ಘಟನೆ ಎಂದೂ ಆಗಬಾರದು. ಅವರ ವಿರುದ್ಧ ಕ್ರಮವಾಗಲಿ. ಕಾಂಗ್ರೆಸ್ ನಾಯಕರೇ ಸದನದಲ್ಲಿ ಚೀಟಿ ನೀಡಿ ಮಾಹಿತಿ ಹೇಳಿಕೆ ವಿಚಾರದಲ್ಲಿಯೂ  ಕೂಡ ತನಿಖೆಯಾಗಬೇಕು ಎಂದರು.

ಚೀಟಿ ಯಾರು ಯಾರಿಗೆ ಕೊಟ್ಟರು ಎನ್ನೋದು ತನಿಖೆ ಆಗಲಿ. ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಆಗಿದ್ದ ದಿನ ನಾನು ಸದನದಲ್ಲಿ ಇರಲಿಲ್ಲ. ಈ‌ ಹನಿಟ್ರ್ಯಾಪ್ ಚಾಳಿ ಅಂತ್ಯವಾಗಬೇಕು ಎಂದರು.

ನಿಮಗೆ ಏನಾದರೂ ಹನಿಟ್ರ್ಯಾಪ್ ಅನುಭವ ಆಗಿದಿಯಾ ಎಂಬ ಪ್ರಶ್ನೆ‌ಗೆ, ನನಗೆ ಹನಿಟ್ರ್ಯಾಪ್ ಹೇಗೆ ಆಗುತ್ತೆ, ನಾನು ಹೆಣ್ಣು ಮಕ್ಕಳು ಹಿಂದೆ ಹೋದರೆ ತಾನೇ ಆಗೊದು. ಬರ್ತಿಯಾ ಅಂತಾ ಕರೆದರೆ ಅಥವಾ ಅಲ್ಲಿಗೆ ಬಾ ಇಲ್ಲಿಗೆ ಬಾ ಅಂತಾ ಕರೆದರೆ ನನ್ನ ಹನಿಟ್ರ್ಯಾಪ್ ಮಾಡ್ತಾರೆ ಎಂದರು.

ನಾನು ಪಕ್ಷದ ಭಾಗವಾಗಿ ಶಾಸಕನಾಗಿ ಹೇಳೊದಿಷ್ಟೇ.  ಹನಿಟ್ರ್ಯಾಪ್ ವಿಚಾರವನ್ನ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಿತ್ತು.  ಹಾದಿರಂಪ ಬೀದಿ ರಂಪ ಮಾಡಿದ್ರೆ ಪಕ್ಷದ ಇಮೇಜ್ ಕಳೆದುಕೊಳ್ಳುತ್ತದೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ