ರೇಣುಕಾ ಸ್ವಾಮಿ ಕೊಲೆ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆ
02/10/2024
ತುಮಕೂರು: ತುಮಕೂರಿನ ಜಿಲ್ಲಾ ಕಾರಾಗೃಹದಲ್ಲಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಇಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದರು.
ಎ 15 ಆರೋಪಿ ಕಾರ್ತಿಕ್, ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಬಿಡುಗಡೆಯಾದವರಾಗಿದ್ದಾರೆ. ಜಾಮೀನು ಮಂಜೂರು ಬಳಿಕ ಸತತ 10 ದಿನಗಳ ನಂತರ ಬಿಡುಗಡೆಯಾಗಿರುವುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ಜಾಮೀನು ದೊರೆತರೂ ಕೂಡ ಜೈಲಿನಿಂದ ಹೊರಬರಲು ಕೆಲವು ವಿಷಯಗಳಿಂದ ಅವರಿಗೆ ಹಿನ್ನಡೆ ಉಂಟಾಗಿತ್ತು. ಜೈಲಿನಿಂದ ಬಿಡುಗಡೆಯಾದ ಮೂವರು ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ, ಅಲ್ಲದೆ ಪೊಲೀಸರಿಗೆ ನಾವು ಈಗಾಗಲೇ ಹೇಳಿಕೆಯನ್ನು ನೀಡಿದ್ದೇವೆ ಎಂದು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: