ಪ್ರಧಾನಿ ಜತೆ ಭಿನ್ನಾಭಿಪ್ರಾಯ: ಇಸ್ರೇಲ್ ಸಂಪುಟಕ್ಕೆ ಮೂವರು ಸಚಿವರ ರಾಜೀನಾಮೆ

ಇಸ್ರೇಲ್ ನ ಯುದ್ಧಕಾಲ ಸಂಪುಟಕ್ಕೆ ಬೆನ್ ಗ್ಯಾಂಡ್ಸನ್ ಸಹಿತ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣದಿಂದ ಈ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ಒತ್ತೆಯಾಗಳನ್ನು ಬಿಡಿಸುವ ಕಾರಣವನ್ನು ನೀಡಿ ನುಸೈರಾತ್ ಮತ್ತು ಧೇರುಲ್ ಬಲಗೆ ಇಸ್ರೇಲ್ ನಡೆಸಿದ ಬಾಂಬು ದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ 274ನ್ನು ದಾಟಿದೆ.
ಹಮಾಸ್ ನ ಒತ್ತೆಯಲ್ಲಿರುವ ನಾಲ್ಕು ಮಂದಿ ಬಂದಿಗಳನ್ನು ಬಿಡಿಸುವುದಕ್ಕಾಗಿ ಇಸ್ರೇಲ್ ಇಂತಹ ಕ್ರೂರ ಕೃತ್ಯವನ್ನು ಎಸಗಿದೆ. ಈ ಬಾಂಬ್ ದಾಳಿಯಲ್ಲಿ 700 ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆ ಮತ್ತು ಮಕ್ಕಳಾಗಿದ್ದಾರೆ.
ಈ ನಡುವೆ ಬಂದ ಮುಕ್ತರಾದ ನಾಲ್ಕು ಮಂದಿಯನ್ನು ಇಸ್ರೇಲ್ ಗೆ ರವಾನಿಸಲಾಗಿದ್ದು ಅವರನ್ನು ಪ್ರಧಾನಿ ನೇತಾನ್ಯಾಹು ಭೇಟಿಯಾಗಿದ್ದಾರೆ. ಯಾಗಿದೆ ಅವರು ಮತ್ತು ಅವರ ಕುಟುಂಬದ ಜೊತೆ ನೇತಾನ್ಯಾಹು ಅವರು ಜೊತೆಗಿರುವ ಫೋಟೋ ಬಿಡುಗಡೆಗೊಂಡಿದೆ. ಇದೇ ವೇಳೆ ಯುದ್ಧ ವಿರಾಮ ಆಗ್ರಹಿಸಿ ಇಸ್ರೇಲ್ ಬೀದಿಗಳಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth