2 ವರ್ಷದ ಮಗು ಸಹಿತ ಒಂದೇ ಕುಟುಂಬದ ಮೂವರನ್ನು ಗುಂಡು ಹಾರಿಸಿ ಬರ್ಬರ ಹತ್ಯೆ! - Mahanayaka

2 ವರ್ಷದ ಮಗು ಸಹಿತ ಒಂದೇ ಕುಟುಂಬದ ಮೂವರನ್ನು ಗುಂಡು ಹಾರಿಸಿ ಬರ್ಬರ ಹತ್ಯೆ!

gopalpur
10/01/2024


Provided by

ಬಿಹಾರ: 2 ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರನ್ನು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೌಗಾಚಿಯಾ ಜಿಲ್ಲೆಯ ಗೋಪಾಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಮರ್ಯಾದೆಗೇಡು ಹತ್ಯೆ ಇದಾಗಿದ್ದು, ಚಂದನ್(40), ಚಾಂದಿನಿ(23), ರೋಶ್ನಿ(2) ಹತ್ಯೆಗೀಡಾದ ಅಮಾಯಕರು.

ಚಾಂದಿನಿಯ ತಂದೆ ಹಾಗೂ ಸಹೋದರ ಸ್ವಲ್ಪವೂ ದಯೆ ಕರುಣೆ ಇಲ್ಲದೇ ರಾಡ್ ನಿಂದ ಹೊಡೆದು ಚಿತ್ರ ಹಿಂಸೆ ನೀಡಿ ಬಳಿಕ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಚಾಂದಿನಿ,  ಮನೆಯವರ ವಿರೋಧ ಕಟ್ಟಿಕೊಂಡು ಚಂದನ್ ಅವರನ್ನು ವಿವಾಹವಾಗಿದ್ದರು.  ಈ ಸೇಡಿನಿಂದ ಕೊಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆನ್ನಲಾಗಿದೆ. ಮೊದಲು ತಂದೆ ಪಪ್ಪು ಸಿಂಗ್, ಇಬ್ಬರಿಗೂ ರಾಡ್ ನಿಂದ ಹೊಡೆದು ಚಿತ್ರ ಹಿಂಸೆ ನೀಡಿದ್ದಾನೆ. ಪಪ್ಪು ಸಿಂಗ್ ನ ಕೊನೆಯ ಮಗ ಧೀರಜ್ ಪುಟ್ಟ ಮಗು ಎಂದೂ ನೋಡದೇ ಮೂವರನ್ನೂ ಗುಂಡು ಹಾರಿಸಿ ಕೊಂದಿದ್ದಾನೆ.

ಹೆತ್ತವರ ಆರೋಗ್ಯ ವಿಚಾರಿಸಲೆಂದು ಚಂದನ್ ಮತ್ತು ಚಾಂದಿನಿ ತಮ್ಮ 2 ವರ್ಷದ ಪುಟ್ಟ ಮಗುವಿನೊಂದಿಗೆ ಗೋಪಾಲ್ ಪುರಕ್ಕೆ  ಬರುತ್ತಿದ್ದಾಗ ಈ ಮನುವಾದೀಯ ಕೃತ್ಯ ಎಸಗಲಾಗಿದೆ.

ಇದನ್ನೂ ಓದಿ:

Click: ಆಸ್ಪತ್ರೆಗೆ ಸೇರಿಸಿಕೊಳ್ಳದ ಸಿಬ್ಬಂದಿ: ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

Click: ಕಾರಿನಲ್ಲಿ ಕುಳಿತಿದ್ದ ಮಹಿಳೆ ಮುಂದೆ ವಿಕೃತಿ  ಪ್ರದರ್ಶಿಸಿದ ಕಾಮುಕ: ಕಿಡಿಗೇಡಿಯ ಬಂಧನಕ್ಕಾಗಿ ತನಿಖೆ ಆರಂಭಿಸಿದ ಪೊಲೀಸರು

Click: ಮಗನನ್ನು ಹತ್ಯೆ ಮಾಡಿ ಬ್ಯಾಗಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್

Click: ಕಾರಿನಲ್ಲಿ ತೆರಳುತ್ತಿದ್ದ ಯುವತಿಯನ್ನು ತಡೆದ ಪುಂಡರ ತಂಡ: ಬೈಕ್‌ ಮೇಲೆ ಕಾರು ಚಲಾಯಿಸಿದ ಯುವತಿ

ಇತ್ತೀಚಿನ ಸುದ್ದಿ