ಗಿಚ್ಚಿಗಿಲಿಗಿಲಿ ವಿನರ್ ಆಗಿ ಹೊರ ಹೊಮ್ಮಿದ ಹುಲಿ ಕಾರ್ತಿಕ್ - Mahanayaka

ಗಿಚ್ಚಿಗಿಲಿಗಿಲಿ ವಿನರ್ ಆಗಿ ಹೊರ ಹೊಮ್ಮಿದ ಹುಲಿ ಕಾರ್ತಿಕ್

huli karthik
16/09/2024

ಕಿರುತೆರೆಯ ಕಾಮಿಡಿ ಶೋ ಗಿಚ್ಚಿಗಿಲಿಗಿಲಿ ಸೀಸನ್ 3 ಗೆ ತೆರೆ ಬಿದ್ದಿದ್ದು, ಈ ಬಾರಿ ವಿನ್ನರ್ ಆಗಿ ನಟ ಹುಲಿ ಕಾರ್ತಿಕ್ ಹೊರಹೊಮ್ಮಿದ್ದಾರೆ. ಮಾನಸ ಅವರು ರನ್ನರ್ ಅಪ್ ಆಗಿದ್ದಾರೆ.

ಹುಲಿ ಕಾರ್ತಿಕ್ 10 ಲಕ್ಷ ರೂ.ಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ಮಾನಸ 3 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಗೆಲುವಿನ ಬೆನ್ನಲ್ಲೇ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ಮಲೆನಾಡಿನ ಕಲಾವಿದ ಹುಲಿ ಕಾರ್ತಿಕ್ ಕೇವಲ ಕಾಮಿಡಿ ಮಾತ್ರವಲ್ಲದೇ ನಟನೆಯಲ್ಲಿ ಬಹಳ ಪ್ರಬುದ್ಧತೆ ಹೊಂದಿದ್ದಾರೆ. ಅವರು ವಿನ್ನರ್ ಆಗಿ ಹೊರಹೊಮ್ಮಿರುವುದು ಗಿಚ್ಚಿಗಿಲಿಗಿಲಿ ವೀಕ್ಷಕರಿಗೆ ಸಂತಸ ಉಂಟು ಮಾಡಿದೆ.

ನನಗೆ ವಾಯ್ಸ್ ಬರುತ್ತಿಲ್ಲ, ನನ್ನ ತಾಯಿಗೆ ಥ್ಯಾಂಕ್ಸ್ ಹೇಳುತ್ತೇನೆ. ಆಕೆ ನನಗೆ ಕೊಟ್ಟ ಫ್ರೀಡಂ ಇದಕ್ಕೆಲ್ಲ ಕಾರಣ ಅಂತ ಹುಲಿ ಕಾರ್ತಿಕ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವುಕ ನುಡಿಗಳನ್ನಾಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ