ಹೊಂಡ ಗುಂಡಿಯ ರಸ್ತೆ ನೋಡಿ ಸಾಕಾಯ್ತು: ಹಾರೆ ಗುದ್ದಲಿ ಹಿಡಿದು ದುರಸ್ತಿ ಮಾಡಿದ ಟ್ರಾಫಿಕ್ ಪೊಲೀಸರು - Mahanayaka

ಹೊಂಡ ಗುಂಡಿಯ ರಸ್ತೆ ನೋಡಿ ಸಾಕಾಯ್ತು: ಹಾರೆ ಗುದ್ದಲಿ ಹಿಡಿದು ದುರಸ್ತಿ ಮಾಡಿದ ಟ್ರಾಫಿಕ್ ಪೊಲೀಸರು

manglore
23/09/2023

ಮಂಗಳೂರು ನಗರದ ನಂತೂರು ಜಂಕ್ಷನ್ ನಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡುತ್ತಿದ್ದ ರಸ್ತೆಯಲ್ಲಿದ್ದ ಹೊಂಡ ಗುಂಡಿಗಳನ್ನು ಮಂಗಳೂರು ನಗರದ ಪೊಲೀಸರೇ ಸ್ವತಃ ಮುಚ್ಚಿದ್ದಾರೆ.

ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಈಶ್ವರ ಸ್ವಾಮಿ, ಎಎಸ್ ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿ ಹಿಡಿದು ಈ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ.

ಪ್ರಮುಖ ಅಪಘಾತ ವಲಯವೆಂದೇ ಗುರುತ್ತಿಲ್ಪಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಈ ಮುಖ್ಯ ಭಾಗದ ತಿರುವಿನ ರಸ್ತೆ ಕಳೆದ ಕೆಲವು ತಿಂಗಳುಗಳಿಂದ ಹೊಂಡ ಗುಂಡಿಗಳಿಂದ ಕೂಡಿತ್ತು. ಹೊಂಡ ಗುಂಡಿಗಳಿಂದ ಸುಗಮ ವಾಹನ ಸಂಚಾರಕ್ಕೂ ದಿನಾಲೂ ತೊಂದರೆಯಾಗುತ್ತಿತ್ತು. ಜೊತೆಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.

ಇತ್ತೀಚಿನ ಸುದ್ದಿ