ಅಂಬೇಡ್ಕರ್ ಪ್ರತಿಮೆಗೆ ದೇಶದ್ರೋಹಿಗಳಿಂದ ಅವಮಾನ: ಸಿಎಂ ತವರು ಜಿಲ್ಲೆಯಲ್ಲೇ ಘಟನೆ - Mahanayaka
10:34 AM Saturday 23 - August 2025

ಅಂಬೇಡ್ಕರ್ ಪ್ರತಿಮೆಗೆ ದೇಶದ್ರೋಹಿಗಳಿಂದ ಅವಮಾನ: ಸಿಎಂ ತವರು ಜಿಲ್ಲೆಯಲ್ಲೇ ಘಟನೆ

nanjanagudu
16/05/2025


Provided by

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ಅಂಬೇಡ್ಕರ್‌ ಅವರಿಗೆ ದೇಶದ್ರೋಹಿಗಳು ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಿಡಿಗೇಡಿಗಳು ಡಾ.ಬಿ.ಆರ್.‌ಅಂಬೇಡ್ಕರ್‌ ನಾಮಫಲಕ ಹರಿದು ಹಾಕಿದ್ದಲ್ಲದೇ ಅದಕ್ಕೆ ಸಗಣಿ ಎರಚಿ ದೇಶದ್ರೋಹಿಗಳು ವಿಕೃತಿ ಮೆರೆದಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಹಲ್ಲರೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಇನ್ನು ಕೆಳದ ಕೆಲ ದಿನಗಳ ಹಿಂದಷ್ಟೆ ಸಿಎಂ ಸ್ವಕ್ಷೇತ್ರ ವಾಜಮಂಗಲ‌ ಗ್ರಾಮದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್‌ ಗೆ ಅಪಮಾನ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ದೇಶದ್ರೋಹಿಗಳು ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ.

ಕಳೆದ ವರ್ಷ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ ಈ ಗ್ರಾಮದಲ್ಲಿ ಭಾರೀ ಗಲಾಟೆ ಉಂಟಾಗಿತ್ತು. ಪ್ರಕರಣ ಸಂಬಂಧ ಸುಮಾರು 30ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಶಾಸಕರುಗಳಾದ ದರ್ಶನ್ ಧ್ರುವನಾರಾಯಣ್ ಹಾಗೂ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಅಂಬೇಡ್ಕರ್ ನಾಮಫಲಕ ಅಳವಡಿಸಲಾಗಿತ್ತು.

ನಿನ್ನೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಸಿಸಿ‌ ಕ್ಯಾಮರಾ ಕಾರ್ಯನಿರ್ವಹಿಸದ ಸಮಯ ನೋಡಿ ದೇಶದ್ರೋಹಿಗಳು ಅಂಬೇಡ್ಕರ್‌ಗೆ ಅಪಮಾನ ಎಸಗಿದ್ದಾರೆ.

ಇಡೀ ದೇಶಕ್ಕೆ ಸಂವಿಧಾನ ನೀಡಿದ ಅಪ್ಪಟ ದೇಶ ಪ್ರೇಮಿ ಅಂಬೇಡ್ಕರ್ ಅವರನ್ನು ಸಹಿಸದ ದೇಶದ್ರೋಹಿಗಳ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಿಕೊಂಡು ದೇಶದಿಂದಲೇ ಗಡಿಪಾರು ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ