ಮಂಗಳೂರಿನಲ್ಲಿ ಸಾರಿಗೆ ಉದ್ಯಮಿ ಸಾವಿಗೆ ಶರಣು!

28/02/2024
ಮಂಗಳೂರು: ಖಾಸಗಿ ಬಸ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಉದ್ಯಮಿಯೋರ್ವರು ನೇಣು ಬಿಗಿದು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಬಜಾಲ್ ನಿವಾಸಿ ಪ್ರಜ್ವಲ್ ಡಿ.(35) ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಇವರು ಭವಾನಿ ಬಸ್ ಮಾಲಿಕರಾಗಿದ್ದ ದೇವೇಂದ್ರ ಅವರ 2ನೇಯ ಪುತ್ರ ಆಗಿದ್ದಾರೆ.
ಎಂ.ಜೆ.ರೋಡ್ ನಲ್ಲಿರುವ ಸ್ವಗೃಹದಲ್ಲಿ ಪ್ರಜ್ವಲ್ ಸಾವಿಗೆ ಶರಣಾಗಿದ್ದಾರೆ. ಇವರ ಸಹೋದರ ಬಸ್ ನ ಮಾಲಿಕರಾಗಿದ್ದು, ಪ್ರಜ್ವಲ್ ಅದೇ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಜ್ವಲ್ ಅವರ ಸಾವಿಗೆ ನಿಖರ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth