ಗುಜರಾತ್ ‌ನಲ್ಲಿ ಕಟ್ಟಡ ಕುಸಿತ ಪ್ರಕರಣ: 7 ಗಂಟೆಗಳ ನಂತರ ಕಾರ್ಮಿಕನ ರಕ್ಷಣೆ - Mahanayaka

ಗುಜರಾತ್ ‌ನಲ್ಲಿ ಕಟ್ಟಡ ಕುಸಿತ ಪ್ರಕರಣ: 7 ಗಂಟೆಗಳ ನಂತರ ಕಾರ್ಮಿಕನ ರಕ್ಷಣೆ

09/03/2024


Provided by

ಗುಜರಾತ್ ನ ಮೊರ್ಬಿಯಲ್ಲಿ ಶುಕ್ರವಾರ ಸಂಜೆ ಕುಸಿದ ವೈದ್ಯಕೀಯ ಕಾಲೇಜು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕನನ್ನು ಏಳು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಶುಕ್ರವಾರ ಸಂಜೆ ಸಂಭವಿಸಿದ ಘಟನೆಯಲ್ಲಿ ಇತರ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಘಟನೆಯ ನಂತರ ನಾಲ್ವರು ಕಾರ್ಮಿಕರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ, ಆದರೆ ಓರ್ವ ಕಾರ್ಮಿಕ ಸಿಕ್ಕಿಬಿದ್ದಿದ್ದಾನೆ, ಅವನ ಮುಖ ಮಾತ್ರ ಗೋಚರಿಸುತ್ತಿತ್ತು. ಅಂತಿಮವಾಗಿ ಅಗ್ನಿಶಾಮಕ ಅಧಿಕಾರಿಗಳ ಸಹಾಯದಿಂದ ಮುಂಜಾನೆ ೩ ಗಂಟೆಗೆ ಅವರನ್ನು ರಕ್ಷಿಸಲಾಗಿದೆ.

“ನಿರ್ಮಾಣ ಹಂತದಲ್ಲಿದ್ದ ಹೊಸ ವೈದ್ಯಕೀಯ ಕಾಲೇಜಿನ ಸೈಡ್ ಸ್ಲ್ಯಾಬ್ ಕುಸಿದಿದೆ ಎಂದು ರಾತ್ರಿ 8 ಗಂಟೆಗೆ ನಮಗೆ ಕರೆ ಬಂತು. ನಾವು ಸ್ಥಳಕ್ಕೆ ತಲುಪಿ 4 ಜನರನ್ನು ರಕ್ಷಿಸಿದ್ದೇವೆ. ಆದರೆ ಒಬ್ಬ ವ್ಯಕ್ತಿ ಇನ್ನೂ ಅವಶೇಷಗಳ ಅಡಿಯಲ್ಲಿ ಇದ್ದ. ಅವನ ಮುಖ ಗೋಚರಿಸುತ್ತಿತ್ತು, ಆದರೆ ಅವನ ದೇಹವು ಚಪ್ಪಡಿ ಮತ್ತು ಕಾಂಕ್ರೀಟ್ ನಡುವೆ ಸಿಲುಕಿಕೊಂಡಿತ್ತು. ನಾವು ಮುಂಜಾನೆ 3 ಗಂಟೆಗೆ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ” ಎಂದು ಅಗ್ನಿಶಾಮಕ ಅಧಿಕಾರಿ ದೇವೇಂದ್ರ ಸಿಂಗ್ ಜಡೇಜಾ ಎಎನ್ಐಗೆ ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜಿನ ಹೊಸ ಕಟ್ಟಡದ ಮೊದಲ ಮಹಡಿಯಲ್ಲಿ ಕೆಲಸದ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಲ್ಯಾಬ್ ಕುಸಿದು ಕನಿಷ್ಠ ನಾಲ್ಕು ಕಾರ್ಮಿಕರು ಗಾಯಗೊಂಡಿದ್ದಾರೆ.

 

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ