ಅಪ್ಪ ಕಡಿದ ಮರ ಮಗನ ತಲೆ ಬಿದ್ದು ಮಗ ಸ್ಥಳದಲ್ಲೇ ಸಾವು!

08/06/2024
ಚಿಕ್ಕಮಗಳೂರು: ಮರ ಕಡಿಯುವಾಗ ಮರ ಬಿದ್ದು ಯುವಕರೊಬ್ಬರು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟಿನಲ್ಲಿ ನಡೆದಿದೆ.
ಅಬ್ದುಲ್ ಅಜೀಜ್ (20) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೇರಳದಿಂದ ಟಿಂಬರ್ ಕಡಿಯಲು ಅಪ್ಪ-ಮಗ ಬಂದಿದ್ದರು ಎನ್ನಲಾಗಿದೆ.
ಅಪ್ಪ ಮರ ಕತ್ತರಿಸುತ್ತಿದ್ದು, ಈ ವೇಳೆ ಮಗ ಕೆಳಗೆ ನಿಂತಿದ್ದ. ಈ ವೇಳೆ ಮರ ಆಕಸ್ಮಿಕವಾಗಿ ಅಬ್ದುಲ್ ಅಜೀಜ್ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97