ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಮಂದಿಯ ಬಂಧನ

ಛತ್ತೀಸ್ ಗಢದ ರಾಯಗಢ ಜಿಲ್ಲೆಯಲ್ಲಿ ಮದ್ಯದ ಅಮಲಿನಲ್ಲಿ 27 ವರ್ಷದ ಬುಡಕಟ್ಟು ಯುವತಿಯ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ದಾರುಣ ಘಟನೆ ನಡೆದಿದೆ.
ಮಹಿಳೆಯ ದೂರಿನ ಪ್ರಕಾರ, ಆಗಸ್ಟ್ 12 ರಂದು ರಕ್ಷಾಬಂಧನವನ್ನು ಆಚರಿಸಿದ ನಂತರ ಸ್ಥಳೀಯ ಜಾತ್ರೆಗೆ ಭೇಟಿ ನೀಡಲು ತೆರಳುತ್ತಿದ್ದಾಗ ರಾಯಗಢದ ಪುಸೌರ್ ಪ್ರದೇಶದ ಹಳ್ಳಿಯ ಬಳಿ ಈ ಘಟನೆ ನಡೆದಿದೆ.
ರಾಯ್ ಗಢಕ್ಕೆ ಹೋಗುತ್ತಿದ್ದಾಗ ಎಂಟು ಜನರು ಅವಳನ್ನು ಅಪಹರಿಸಿ ಬಲವಂತವಾಗಿ ಹತ್ತಿರದ ಕೊಳಕ್ಕೆ ಕರೆದೊಯ್ದು ಅಲ್ಲಿ ಐದು ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ನಂತರ, ಮಹಿಳೆ ಹೇಗೋ ತನ್ನ ಮನೆಗೆ ತಲುಪಿ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth