ಟ್ರಂಪ್ ಅವರದು 'ಪುಂಡ' ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ - Mahanayaka
8:47 PM Sunday 28 - September 2025

ಟ್ರಂಪ್ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ

chaina india
08/08/2025

ಬೀಜಿಂಗ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪಾಕಿಸ್ತಾನದ ಪರ ನಿಂತು ಭಾರತದ ಆರ್ಥಿಕತೆಯ ಮೇಲೆ ಸುಂಕ ಹೇರಲು ಮುಂದಾಗಿದ್ದಾರೆ. ಇತ್ತ ರಷ್ಯಾ ಭಾರತದ ಬೆನ್ನಿಗೆ ನಿಂತು ಬೆಂಬಲ ಸೂಚಿಸಿದೆ. ಇದೀಗ ಅಚ್ಚರಿ ಎಂಬಂತೆ ಚೀನಾ ಕೂಡ ಭಾರತದ ಪರವಾಗಿ ನಿಂತಿದ್ದು, ಚೀನಾ ಹಾಗೂ ಭಾರತದ ಸಂಬಂಧದಲ್ಲಿ ಉತ್ತಮ ಬೆಳವಣಿಗೆ ಇದಾಗಿದೆ.


Provided by

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಮೇಲೆ ವಿಧಿಸಿರುವ ಪ್ರತಿಸುಂಕ ಸಂಬಂಧ ಚೀನಾ ಪ್ರತಿಕ್ರಿಯೆ ನೀಡಿದೆ. ಭಾರತದ ಸರಕುಗಳ ಮೇಲೆ ಶೇ. 25+25 = 50 ರಷ್ಟು ಸುಂಕ ವಿಧಿಸುವ ಆದೇಶ ಹೊರಡಿಸಿರುವ ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿಯಾಗಿದೆ ಎಂದು ಚೀನಾ ಹೇಳಿದೆ.

ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್‌ ಅಮೆರಿಕ ಅಧ್ಯಕ್ಷರ ಹುಚ್ಚುತನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟ್ರಂಪ್‌ ಸುಂಕ ನೀತಿಗೆ ಮುಟ್ಟಿ ಕೊಳ್ಳುವಂತೆ ತಿರುಗೇಟು ನೀಡಿದರೆ ಒಂದು ಮೈಲಿ ದೂರ ಓಡಿ ಹೋಗುತ್ತಾರೆ. ಇಂತಹ ಪುಂಡ ನೀತಿಗಳನ್ನು ಧೈರ್ಯವಾಗಿ ಎದುರಿಸಿದರೆ, ತೆಪ್ಪಗಾಗುತ್ತಾರೆ. ಟ್ರಂಪ್‌ ಪ್ರತಿಸುಂಕ ಕ್ರಮಗಳು ವಿಶ್ವ ವ್ಯಾಪಾರ ಒಕ್ಕೂಟವನ್ನು ದುರ್ಬಲಗೊಳಿಸಲಿವೆ. ವಿಶ್ವಸಂಸ್ಥೆಯ ನಿಮಯಗಳಿಗೆ ವಿರುದ್ಧವಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ  ಅವರು ಛಾಟಿ ಬೀಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ