ಹಾಡಹಗಲೇ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಭೀಕರ ಕೊಲೆ

ತುಮಕೂರು: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನ ಹಾಡಹಗಲೇ ಚಾಕುವಿನಿಂದ ಚುಚ್ಚಿ ಭೀಕರ ಕೊಲೆ ಮಾಡಿರೋ ಘಟನೆ ತುಮಕೂರು ನಗರದ ಬಟವಾಡಿ ಬಳಿಯ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ನಫೀಸ್ ಅಹಮ್ಮದ್ (33) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ತುಮಕೂರು ನಗರದ ಕೋತಿತೋಪು ನಿವಾಸಿ ನಫೀಸ್ ಅಹಮದ್ ಭೀಕರವಾಗಿ ಹತ್ಯೆಯಾದ ವ್ಯಕ್ತಿಯಾಗಿದ್ದು ಫೈರೋಜ್ ಪಾಷಾ ಎನ್ನುವ ವ್ಯಕ್ತಿಯು ಕೊಲೆ ಮಾಡಿದ್ದಾನೆ.
ಕೊಲೆಯಾದ ನಫೀಸ್ ಅಹಮ್ಮದ್, ಟೈಲ್ಸ್ ಕೆಲಸ ಮಾಡ್ತಿದ್ದನು. ಆರೋಪಿ ಫೈರೋಜ್ ಪಾಷಾ, ಬೈಕ್ ಗ್ಯಾರೇಜ್ ಇಟ್ಟುಕೊಂಡಿದ್ದನು. ಆರೋಪಿ ಫೈರೋಜ್ ಪಾಷಾ ಎಂಬಾತನಿಂದ ಸಾಲವಾಗಿ ನಫೀಸ್ ಅಹಮ್ಮದ್ ನಿಂದ ಹಣ ಪಡೆದಿದ್ದನು.
ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಕೊನೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಎನ್ ಇಪಿಎಸ್ ಪೊಲೀಸ್ ಠಾಣೆ ಪೊಲೀಸರು ಹಾಗೂ ತುಮಕೂರು ಎಸ್ ಪಿ ಅಶೋಕ್ ಕೆ.ವಿ. ಭೇಟಿ ಪರಿಶೀಲನೆ ನಡೆಸಿದರು.
ಘಟನೆ ಸಂಬಂಧ ಎನ್ ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿ ಫೈರೋಜ್ ಪಾಷಾ ನನ್ನ ಪೊಲೀಸರು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: