ಒಂದೇ ಮಂಟಪದಲ್ಲಿ ಅವಳಿ ಸಹೋದರಿಯರನ್ನು ವಿವಾಹವಾದ ವರನಿಗೆ ಸಂಕಷ್ಟ! - Mahanayaka
8:20 AM Wednesday 3 - September 2025

ಒಂದೇ ಮಂಟಪದಲ್ಲಿ ಅವಳಿ ಸಹೋದರಿಯರನ್ನು ವಿವಾಹವಾದ ವರನಿಗೆ ಸಂಕಷ್ಟ!

solapur
05/12/2022


Provided by

ಯುವಕನೋರ್ವ ಒಂದೇ ಮಂಟಪದಲ್ಲಿ ಅವಳಿ ಸಹೋದರಿಯರನ್ನು ವಿವಾಹವಾದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದ್ದು, ಈ ವಿವಾಹದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವರನಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.

ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್ ನಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ವೃತ್ತಿಯಲ್ಲಿ ಐಟಿ ಇಂಜಿನಿಯರ್ ಆಗಿರುವ ಪಿಂಕಿ ಮತ್ತು ರಿಂಕಿ ಅತುಲ್ ಅವತಾಡೆ ಎಂಬ ಯುವಕನನ್ನು ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾರೆ.

ತಂದೆ ನಿಧನರಾದ ಬಳಿಕ ತಾಯಿಯ ಜೊತೆಗೆ ಪಿಂಕಿ ಮತ್ತು ರಿಂಕಿ ವಾಸವಿದ್ದರು. ಇತ್ತೀಚೆಗೆ ತಾಯಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ  ಅತುಲ್ ಟ್ಯಾಕ್ಸಿಯಲ್ಲಿ ಇವರ ತಾಯಿಯನ್ನು ಕರೆದೊಯ್ಯಲು ಬರುತ್ತಿದ್ದು, ಈ ವೇಳೆ ಪರಸ್ಪರ ಪರಿಚಯವಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಸಹೋದರಿಯರು ಒಬ್ಬನೇ ವರನನ್ನು ವಿವಾಹವಾಗಲು ತೀರ್ಮಾನಿಸಿದ್ದರು.

ಸಹೋದರಿಯರ ನಿರ್ಧಾರಕ್ಕೆ ಕುಟುಂಬಸ್ಥರು ಹಾಗೂ ವರನ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ವಿವಾಹವೂ ನಡೆದುಹೋಗಿದೆ. ಈ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೀಗ ವರನ ವಿರುದ್ಧ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದ್ದು,  ಭಾರತೀಯ ದಂಡ ಸಂಹಿತೆ ಸೆಕ್ಷನ್ 498 ಅಡಿಯಲ್ಲಿ ನಾನ್ –ಕಾಗ್ನೈಸಬಲ್ ಅಪರಾಧವನ್ನು ದಾಖಲಿಸಲಾಗಿದೆ.

ಈ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಪಸ್ವರಗಳು ಕೇಳಿ ಬಂದಿದ್ದವು. ಯಾವ ನೈತಿಕತೆಯೆಡೆಗೆ ಸಮಾಜ ಸಾಗುತ್ತಿದೆ ಅನ್ನೋ ಪ್ರಶ್ನೆಗಳು ಕೇಳಿ ಬಂದಿದ್ದವು. ಇದೀಗ ವರನಿಗೆ ಕಾನೂನಿನ ಸಂಕಷ್ಟ ಕೂಡ ಸುತ್ತಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ