ನಟಿ ವಿದ್ಯಾ ಹತ್ಯೆಗೆ ಟ್ವಿಸ್ಟ್: ಆ ಒಂದು ಕಾರಣಕ್ಕಾಗಿ  ಹತ್ಯೆ ನಡೆಯಿತೇ? - Mahanayaka
2:35 PM Wednesday 22 - October 2025

ನಟಿ ವಿದ್ಯಾ ಹತ್ಯೆಗೆ ಟ್ವಿಸ್ಟ್: ಆ ಒಂದು ಕಾರಣಕ್ಕಾಗಿ  ಹತ್ಯೆ ನಡೆಯಿತೇ?

vidya
24/05/2024

ಮೈಸೂರು: ಜಿಲ್ಲೆಯ ಬನ್ನೂರಿನ ತುರಗನೂರು ಗ್ರಾಮದಲ್ಲಿ 3 ದಿನಗಳ ನಡೆದಿದ್ದ ನಟಿ ವಿದ್ಯಾ ಭೀಕರ ಹತ್ಯೆ ಹಿನ್ನೆಲೆ ಪೊಲೀಸರು ತನಿಖೆ  ನಡೆಸುತ್ತಿದ್ದು, ಇದೀಗ ಪೊಲೀಸರು ಹತ್ಯೆ ರಹಸ್ಯವನ್ನು ಭೇದಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ  ವಿದ್ಯಾ ಅವರ ಪತಿಯೇ ಆಕೆಯನ್ನ ಭೀಕರವಾಗಿ ಹತ್ಯೆ ಮಾಡಿದ್ದ. ಪತಿ ಪತ್ನಿಯ ನಡುವೆ ಗಲಾಟೆಯ ವೇಳೆ  ಮೊಬೈಲ್ ವಿಚಾರಕ್ಕೆ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿತ್ತು ಎನ್ನಲಾಗಿದೆ.

ವಿದ್ಯಾ ಅವರು ಪತಿಯ ಮೊಬೈಲ್ ನ್ನು ಕಿತ್ತುಕೊಂಡಿರುವುದೇ ಹತ್ಯೆಗೆ ಕಾರಣ ಎನ್ನಲಾಗಿದೆ. ಗಲಾಟೆಯ ದೃಶ್ಯವನ್ನು ಪತಿ ವಿಡಿಯೋ ಮಾಡಿಕೊಳ್ಳುತ್ತಿದ್ದ, ಈ ವೇಳೆ ಪತ್ನಿ ಮೊಬೈಲ್ ಕಿತ್ತುಕೊಂಡಿದ್ದು, ಇದರಿಂದ ಆಕ್ರೋಶಗೊಂಡು ರಾಡ್ ನಿಂದ ವಿದ್ಯಾ ಅವರ ತಲೆಗೆ  ಹೊಡೆದಿದ್ದ.  ಏಟಿನ ತೀವ್ರತೆಗೆ ಸ್ಥಳದಲ್ಲೇ ಕುಸಿದು ಬಿದ್ದ ವಿದ್ಯಾ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪತಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.

ಸದ್ಯ ವಿದ್ಯಾ ಅವರನ್ನು ಹತ್ಯೆ ಮಾಡಿದ್ದ ನಂದೀಶ್ ​​ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.


 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ