ಛತ್ರಿ ಹಿಡಿದು ಬಸ್ ಚಲಾಯಿಸಿದ ಚಾಲಕ: ಅಸಲಿ ವಿಚಾರ ಬಯಲು, ಚಾಲಕ ನಿರ್ವಾಹಕಿ ಅಮಾನತು - Mahanayaka

ಛತ್ರಿ ಹಿಡಿದು ಬಸ್ ಚಲಾಯಿಸಿದ ಚಾಲಕ: ಅಸಲಿ ವಿಚಾರ ಬಯಲು, ಚಾಲಕ ನಿರ್ವಾಹಕಿ ಅಮಾನತು

umbrella
24/05/2024

ಧಾರವಾಡ: KSRTC ಬಸ್ ಚಾಲಕನೋರ್ವ ಬಸ್ ನ ಛಾವಣಿಯಿಂದ ಸೋರುತ್ತಿರು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ಬಸ್ ಚಲಾಯಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಬಸ್ ನ ಚಾಲಕ ಹಾಗೂ ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ.


Provided by

ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಮೊದಲೇ ಫ್ರೀ ಬಸ್ ಯೋಜನೆಯ ಮೇಲೆ ಟಾರ್ಗೆಟ್ ಇಟ್ಟಿದ್ದ ಎಲ್ಲರೂ ಎದ್ದು ಬಿದ್ದು ಈ ದೃಶ್ಯವನ್ನು ಹಂಚಿಕೊಂಡು KSRTC ಬಸ್  ಛಾವಣಿ ಸೋರುತ್ತಿದೆ, ಸರಿಪಡಿಸಲು ಸರ್ಕಾರದ ಬಳಿ ದುಡ್ಡಿಲ್ಲ ಎಂಬಂತ ಹಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದವು. ಸಾಕಷ್ಟು ಜನರು ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದರು.

ಇದೀಗ ಘಟನೆಯ ಹಿಂದಿನ ಸತ್ಯಾಂಶ ಬೆಳಕಿಗೆ ಬಂದಿದೆ. ಕೆಎ-25, ಎಫ್-1336 ನಂಬರಿನ ಬಸ್ ನ ಚಾಲಕ ಹನುಮಂತಪ್ಪ ಮತ್ತು ನಿರ್ವಾಹಕಿ ಅನಿತಾ ಬಸ್ ನಲ್ಲಿ ಜನರಿಲ್ಲದ ವೇಳೆ ರೀಲ್ಸ್ ಗಾಗಿ ಈ ವಿಡಿಯೋ ಮಾಡಿದ್ದರು. ಆದರೆ, ಇದೀಗ ರೀಲ್ಸ್ ನಿಂದಾಗಿ ಇಬ್ಬರೂ ಕೆಲಸ ಕಳೆದುಕೊಂಡಿದ್ದು, ಇಬ್ಬರನ್ನೂ ಅಮಾನತು ಮಾಡಲಾಗಿದೆ.


Provided by

ಅಂದ ಹಾಗೆ ಬಸ್ಸಿನಲ್ಲಿ ರೀಲ್ಸ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾರಿಂದಲೂ ದೂರುಗಳು ಬಂದಿಲ್ಲ ಎನ್ನಲಾಗಿದೆ. ಆದರೆ ಸುಖಾಸುಮ್ಮನೆ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನೂ ಅಮಾನತು ಮಾಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ  ಕೆಎಸ್ ​​ಆರ್​ ಟಿಸಿ ಸಂಸ್ಥೆ,  ನಿನ್ನೆ ಧಾರವಾಡ ಘಟಕದ ಬಸ್ ಸಂಖ್ಯೆ ಕೆಎ-25 ,ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಚಾಲಕ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಮಳೆ ಬರುತ್ತಿದ್ದ ಸಮಯದಲ್ಲಿ ಬಸ್​ ನಲ್ಲಿ ಮನೋರಂಜನೆಗಾಗಿ ರೀಲ್ಸ್ ಮಾಡಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಕಂಡೆಕ್ಟರ್ ಛತ್ರಿ ಹಿಡಿದು ಚಾಲನೆ ಮಾಡಿದ್ದಾರೆ. ಇದನ್ನು ನಿರ್ವಾಹಕಿ ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ. ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ