ಮದುವೆ ಹೆಸರಲ್ಲಿ ನಡೆಯುವ ಇಸ್ಲಾಂ ವಿರೋಧಿ ಆಚರಣೆಗಳಿಗೆ ನಿಷೇಧ ಹೇರಿದ ಯುಪಿ ಮುಸ್ಲಿಮರು - Mahanayaka

ಮದುವೆ ಹೆಸರಲ್ಲಿ ನಡೆಯುವ ಇಸ್ಲಾಂ ವಿರೋಧಿ ಆಚರಣೆಗಳಿಗೆ ನಿಷೇಧ ಹೇರಿದ ಯುಪಿ ಮುಸ್ಲಿಮರು

24/05/2024

ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ನ ಸೂರಜ್ ನಗರದ ಮುಸ್ಲಿಮರು ಮದುವೆಗೆ ಸಂಬಂಧಿಸಿದ ಕೆಲವು ಕಟ್ಟುನಿಟ್ಟುಗಳನ್ನು ಘೋಷಿಸಿದ್ದಾರೆ. ಮದುವೆ ಹೆಸರಲ್ಲಿ ನಡೆಯುವ ಕೆಲವು ಇಸ್ಲಾಂ ವಿರೋಧಿ ಆಚರಣೆಗಳಿಗೆ ನಿಷೇಧ ವಿಧಿಸಿದ್ದಾರೆ.


Provided by

ಮುಸ್ಲಿಂ ಸಮುದಾಯದ ಉಲೇಮಾಗಳು ಇಮಾಮರು ಮತ್ತು ಮುಖಂಡರು ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇಸ್ಲಾಹ್ ಎ ಮೌಶಿರ ಕಮಿಟಿಯು ಈ ಘೋಷಣೆ ಮಾಡಿದ್ದು ಮದುವೆಯಲ್ಲಿ ಹಲ್ದಿ ಆಚರಣೆ ಮಾಡಬಾರದು ಎಂದು ಅದು ಹೇಳಿದೆ. ಹಾಗೆಯೇ ಪಟಾಕಿ ಸಿಡಿಸಬಾರದು ಜೊತೆಗೆ ಡಿಜೆ ಸಹಿತ ಡ್ಯಾನ್ಸ್, ಸಂಗೀತ ರಸಮಂಜರಿಯಂತಹ ಯಾವುದೇ ಆಚರಣೆ ಮಾಡಬಾರದು. ಹಾಗೆಯೇ ಬಾರಾತ್ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸಬಾರದು ಎಂದು ಕಮಿಟಿ ಹೇಳಿದೆ.

ಒಂದು ವೇಳೆ ಈ ನಿಯಮವನ್ನು ಜಮಾಅತ್ ಗೆ ಒಳಪಟ್ಟ ಯಾರೇ ಆಗಲಿ ಉಲ್ಲಂಘಿಸಿದರೆ ಅವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕೂಡ ಕಮಿಟಿ ಎಚ್ಚರಿಕೆ ನೀಡಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ