ಹಿಂದೂ ಯುವಕನ ಮೇಲೆ ಹಲ್ಲೆಗೆ ಟ್ವಿಸ್ಟ್: ಮಹಿಳೆಯ ಮನೆಯಲ್ಲಿ ಸಿಕ್ಕಿ ಬಿದ್ದ ವಿಡಿಯೋ ವೈರಲ್ - Mahanayaka
11:23 AM Thursday 13 - November 2025

ಹಿಂದೂ ಯುವಕನ ಮೇಲೆ ಹಲ್ಲೆಗೆ ಟ್ವಿಸ್ಟ್: ಮಹಿಳೆಯ ಮನೆಯಲ್ಲಿ ಸಿಕ್ಕಿ ಬಿದ್ದ ವಿಡಿಯೋ ವೈರಲ್

ajith banakkal
26/05/2023

ಕೊಟ್ಟಿಗೆಹಾರ:  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್’ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು,  ಮುಸ್ಲಿಂ ಮಹಿಳೆ ಮನೆಗೆ ಹೋಗಿದ್ದ  ಸಿಕ್ಕಿ ಬಿದ್ದ ವೇಳೆ ಯುವಕನಿಗೆ  ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.

ಮನೆಯೊಂದರ ಕಪಾಟಿನೊಳಗೆ ಅಡಗಿ ಕುಳಿತಿದ್ದ ಯುವಕನನ್ನು ಹಲವಾರು ಯುವಕರು ಸೇರಿ ಹೊರಗೆ ಬರುವಂತೆ ಧಮ್ಕಿ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯ ಮನೆಗೆ ಹೋದ ಕಾರಣ ಅಲ್ಲಿನ ಯುವಕರು ಸೇರಿ ಥಳಿಸಿದ್ದಾರೆನ್ನಲಾಗುತ್ತಿದೆ.

ಹಲ್ಲೆಗೊಳಗಾದ ಅಜಿತ್ ಎಂಬ ಯುವಕ ಐದಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿರೋದಾಗಿ ಆರೋಪಿಸಿದ್ದಾನೆ. ಹಮ್ಜಾ, ಉಬೇದ್, ಹಿದ್ದು, ರಶೀದ್,  ಸುಹೇಬ್ ಸೇರಿದಂತೆ ಹಲವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಅಜಿತ್ ಆರೋಪಿಸಿದ್ದಾರೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆತ ಆರೋಪಿಸಿದ್ದು,  ಕಾಂಗ್ರೆಸ್ ಸರ್ಕಾರ, ಎಂಎಲ್ ಎ ಬಂದ್ಮೇಲೆ ಈ ರೀತಿ ಆಗುತ್ತಿದೆ ಎಂದಿದ್ದಾರೆ. ಆದರೆ ರಾತ್ರಿ ಮಹಿಳೆಯೊಬ್ಬರ ಮನೆಗೆ ಹೋದ ಯುವಕನನ್ನು ಹಿಡಿದು ಅಲ್ಲಿನ ಸ್ಥಳೀಯರು ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೋಮು ಬಣ್ಣ ಬಳಿಯುವ ಪ್ರಯತ್ನ ಕೂಡ ನಡೆದಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ