ಎಲೋನ್ ಮಸ್ಕ್ ತೆಕ್ಕೆಗೆ ಟ್ವಿಟ್ಟರ್ ಸಂಸ್ಥೆ: ಸಿಇಒ ಪರಾಗ್ ಅಗ್ರವಾಲ್ ಸೇರಿದಂತೆ ಹಲವರ ವಜಾ
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯ ಹಿಡಿತ ಸಾಧಿಸಿದ್ದು, ಇದೀಗ ಟ್ವಿಟ್ಟರ್ ಸಂಸ್ಥೆಯ ಮಾಲಿಕತ್ವ ವಹಿಸಿದ್ದಾರೆ. ಎಲೋನ್ ಮಸ್ಕ್ ಮಾಲೀಕರಾದ ಬೆನ್ನಲ್ಲೇ ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ ಮತ್ತು ಸಿಎಫ್ ಒ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ.
ಎಲೋನ್ ಮಸ್ಕ್ ಈ ವರ್ಷದ ಏಪ್ರಿಲ್ 13 ರಂದು ಟ್ವಿಟರ್ ಖರೀದಿಸಿರುವುದಾಗಿ ಘೋಷಿಸಿದ್ದರು. ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂನ್ನು ಖರೀದಿಸಲು ಅವರು ಪ್ರಸ್ತಾಪಿಸಿದ್ದರು.
ಆದರೆ, ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ, ಅವರು ಆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು. ಜುಲೈ 8 ರಂದು, ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು. ಇದರ ವಿರುದ್ಧ ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
ಆ ಬಳಿಕ ಅಕ್ಟೋಬರ್ ಆರಂಭದಲ್ಲಿ, ಮಸ್ಕ್ ತನ್ನ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು. ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶಿಸಿತು. ಎಲೋನ್ ಮಸ್ಕ್ ಒಂದು ದಿನ ಮುಂಚಿತವಾಗಿ ಟ್ವಿಟ್ಟರ್ ಕಚೇರಿಗೆ ಆಗಮಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka