ಕಬ್ಬಿನ ಗದ್ದೆಗಳಲ್ಲಿ ಭಾರಿ ಗಾತ್ರದ ಎರಡು ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಕಾಡಿಗೆ!! - Mahanayaka

ಕಬ್ಬಿನ ಗದ್ದೆಗಳಲ್ಲಿ ಭಾರಿ ಗಾತ್ರದ ಎರಡು ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಕಾಡಿಗೆ!!

python
22/10/2023


Provided by

ಚಾಮರಾಜನಗರ: ಕಬ್ಬಿನ ಗದ್ದೆಗಳಲ್ಲಿ ಭಾರೀ ಗಾತ್ರದ ಎರಡು ಹೆಬ್ಬಾವುಗಳು ಪತ್ತೆಯಾಗಿರುವ ಘಟನೆ ಇಂದು ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಹಾಗೂ ಹೆಬ್ಬಸೂರು ಗ್ರಾಮದಲ್ಲಿ ನಡೆದಿದೆ.‌

ಮೊಲಗಳನ್ನು ನುಂಗಿ ಗದ್ದೆಯಲ್ಲಿ ಒದ್ದಾಡುತ್ತಿದ್ದ ಹಾವುಗಳನ್ನು ಕಂಡ ಕಾರ್ಮಿಕರು ಹೌಹಾರಿ ಉರಗಪ್ರೇಮಿ ಸ್ನೇಕ್ ಚಾಂಪ್ ಅವರಿಗೆ ಮಾಹಿತಿ ನೀಡಿದ್ದಾರೆ.  ಹೆಬ್ಬಸೂರು ಗ್ರಾಮದ ರಂಗಸ್ವಾಮಿ ಎಂಬುವವರ ಕಬ್ಬಿನ ಗದ್ದೆಯಲ್ಲಿದ್ದ ಹೆಬ್ಬಾವು 7.5 ಅಡಿ ಅಷ್ಟು ಉದ್ದವಿದ್ದರೇ  ಸಿದ್ದಯ್ಯನಪುರ ಗ್ರಾಮದ ಬಸವಣ್ಣ ಎಂಬುವರರ ಜಮೀನಿನಲ್ಲಿದ್ದ ಹೆಬ್ಬಾವು 10.5 ಅಡಿ ಉದ್ದದ ಭಾರಿ ಗಾತ್ರದ ಹಾವಾಗಿತ್ತು.‌

ಒಂದೇ ದಿನ ಎರಡು ಕಡೆ ಎರಡು ಹೆಬ್ಬಾವುಗಳು ಮೊಲಗಳನ್ನ ನುಂಗಿ ಕೊನೆಗೆ ಸ್ನೇಕ್ ಚಾಂಪ್ ಅವರಿಂದ ರಕ್ಷಿಸಲ್ಪಟ್ಟಿವೆ.  ಬಿಳಿಗಿರಿರಂಗನ ಬೆಟ್ಟದ ಸುವರ್ಣಾವತಿ ಹಿನ್ನೀರಿನಲ್ಲಿ ಹಾವುಗಳನ್ನು ಬಿಡಲಾಗಿದೆ.

ಇತ್ತೀಚಿನ ಸುದ್ದಿ