ಮದುವೆ ಸಮಾರಂಭದಲ್ಲಿ ಗಲಾಟೆ: ವಾಹನ ಡಿಕ್ಕಿ ಹೊಡೆದು ಇಬ್ಬರು ಸಾವು - Mahanayaka
11:28 AM Friday 19 - December 2025

ಮದುವೆ ಸಮಾರಂಭದಲ್ಲಿ ಗಲಾಟೆ: ವಾಹನ ಡಿಕ್ಕಿ ಹೊಡೆದು ಇಬ್ಬರು ಸಾವು

01/06/2024

ಮಧ್ಯಪ್ರದೇಶದ ಬೆತುಲ್‌ನಲ್ಲಿ ಮದುವೆ ಸಮಾರಂಭದ ವೇಳೆ ಡಿಜೆ ಸೌಂಡ್ ಸಿಸ್ಟಮ್ ಹೊಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.

ಜಿಲ್ಲೆಯ ತಂಗ್ನಾ ಮಾಲ್ ಗ್ರಾಮದಿಂದ ಪ್ರಾರಂಭವಾದ ಮೆರವಣಿಗೆ ಗುರುವಾರ ರಾತ್ರಿ ಜಮುಧಾನಾ ಗ್ರಾಮವನ್ನು ತಲುಪಿದಾಗ ಈ ಘಟನೆ ನಡೆದಿದೆ.

ರಾತ್ರಿ 10 ಗಂಟೆಯ ನಂತರ ಸೌಂಡ್ ಸಿಸ್ಟಮ್ ನಿರ್ವಹಿಸುವ ವ್ಯಕ್ತಿಯು ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿದಾಗ ಅವನ ಹಾಗೂ ಮದುವೆಯ ಅತಿಥಿಗಳ ನಡುವೆ ವಿವಾದ ಪ್ರಾರಂಭವಾಯಿತು. ನಂತರ ಚಾಲಕ ವಾಹನವನ್ನು ಹಿಂದೆ ಕೊಂಡೊಯ್ಯಲು ಪ್ರಾರಂಭಿಸಿದ್ದಾರೆ. ಮೆರವಣಿಗೆಯ ಭಾಗವಾಗಿದ್ದ ಮೂವರು ಮಹಿಳೆಯರು ವಾಹನದ ಚಕ್ರಗಳ ಅಡಿಯಲ್ಲಿ ಸಿಲುಕಿದ್ದಾರೆ.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯ್ತು.
ಅಲ್ಲಿ ರಾಮರತಿ (55) ಸಾವನ್ನಪ್ಪಿದ್ರೆ ಉಳಿದವರಾದ ರೇಷ್ಮಾ (17) ಮತ್ತು ಶಾಂತಾ (30) ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರೇಷ್ಮಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, ಶಾಂತಾ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಸ್ಥಳೀಯರು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ವಾಹನದ ಚಾಲಕನಿಗಾಗಿ ಶೋಧ ನಡೆಯುತ್ತಿದೆ ಎಂದು ಬೆತುಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಮಲಾ ಜೋಶಿ ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ