ಉದ್ದೇಶಪೂರ್ವಕವಾಗಿ ಆರ್ಥಿಕ ನೆರವು ನೀಡುವ ಯೋಜನೆಯಿಂದ ಮುಸ್ಲಿಮರನ್ನು ಹೊರಗಿಡಲಾಗಿದೆ: ಎಸ್ಪಿ ಸಂಸದರ ಗಂಭೀರ ಆರೋಪ

ಆರ್ಥಿಕವಾಗಿ ದುರ್ಬಲವಾಗಿರುವ ಹಿಂದುಳಿದ ಸಮುದಾಯದ ಯುವತಿಯ ಮದುವೆಗೆ ಆರ್ಥಿಕ ನೆರವು ನೀಡುವ ಯೋಜನೆಯಿಂದ ಮುಸ್ಲಿಮರನ್ನು ಉತ್ತರಪ್ರದೇಶ ಸರಕಾರ ಹೊರಗಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿಖಾನ್ ಪಾರ್ಲಿಮೆಂಟ್ ನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಯನ್ನು ಕೂಡ ಅವರು ಪಾರ್ಲಿಮೆಂಟ್ ನಲ್ಲಿ ಮಂಡಿಸಿದ್ದಾರೆ.
ಜೀರೋ ಅವರ್ ನಲ್ಲಿ ಖಾನ್ ಅವರು ಈ ವಿಷಯವನ್ನು ಎತ್ತಿದರು. ಸಂಬಾಲ ಜಿಲ್ಲೆಯ ಜಿಲ್ಲಾಧಿಕಾರಿಯವರು ಹೊರಡಿಸಿರುವ ಸುತ್ತೋಲೆಯನ್ನು ಕೂಡ ಅವರು ಪಾರ್ಲಿಮೆಂಟ್ ನಲ್ಲಿ ಪ್ರದರ್ಶಿಸಿದರು. ಮುಸ್ಲಿಮರನ್ನು ಹೊರತುಪಡಿಸಿ ಹಿಂದುಳಿದ ಸಮುದಾಯಕ್ಕೆ ಎಂದು ಸ್ಪಷ್ಟವಾಗಿ ಹೇಳಿರುವ ಸುತ್ತೋಲೆಯನ್ನು ಅವರು ಪ್ರದರ್ಶಿಸಿದರು. ಈ ನಡೆಯು ಭಾರತದ ಸಂವಿಧಾನ ಮತ್ತು ಜಾತ್ಯತೀತ ನಿಲುವಿಗೆ ವಿರುದ್ಧ ಎಂದು ಅವರು ಅಭಿಪ್ರಾಯ ಪಟ್ಟರು.
ಹಮಾರಿ ಭೇಟಿ ಉಸ್ಕಾ ಕಲ್ ಎಂಬ ಯೋಜನೆಯನ್ನು 2017ರಲ್ಲಿ ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿ ಆಗಿ ಇದ್ದಾಗ ಜಾರಿಗೆ ತಂದಿದ್ದರು. ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಗಳು ಮದುವೆಯಾಗುವಾಗ, ಅವಳಿಗೆ ರೂ.30,000 ಕೊಡುವುದು ಯೋಜನೆಯ ಉದ್ದೇಶವಾಗಿತ್ತು. ಆ ಬಳಿಕ ಯೋಗಿ ಆದಿತ್ಯನಾಥ್ ಸರಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದರು ಮತ್ತು ಹಿಂದುಳಿದ ಸಮುದಾಯಕ್ಕೆ ಇರುವ ಅನುದಾನವನ್ನು ಹಾಗೆ ಉಳಿಸಿಕೊಂಡರು ಎಂದು ಕಾನ್ ಹೇಳಿದ್ದಾರೆ. ಹಿಂದುಳಿದ ಸಮುದಾಯ ಅಥವಾ ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯವೂ ಬರುತ್ತದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth