ಬಸ್ ನಿಂದ ಆಯತಪ್ಪಿ ಬಿದ್ದು ಹಿಂಬದಿ ಚಕ್ರಕ್ಕೆ ಸಿಲುಕಿದ ವ್ಯಕ್ತಿ ಸಾವು: ನಿರ್ವಾಹಕನ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ
ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಬಸ್ ಹಿಂಬದಿ ಚಕ್ರ ಕಾಲ ಮೇಲೆ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಹಿರ್ಗಾನ ಬಸ್ ನಿಲ್ದಾಣದಲ್ಲಿ ಡಿ.4ರಂದು ಸಂಜೆ ನಡೆದಿದೆ.
ಮೃತರನ್ನು ಹಿರ್ಗಾನ ಗ್ರಾಮದ 70 ವರ್ಷದ ಕೃಷ್ಣ ನಾಯಕ್ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಹಿರ್ಗಾನ ಬಸ್ಟ್ಯಾಂಡ್ ದಲ್ಲಿ ಬಸ್ ಹತ್ತುತಿದ್ದರು. ಆದರೆ ಈ ಸಂದರ್ಭದಲ್ಲಿ ನಿರ್ವಾಹಕ ಜಯಪ್ರಕಾಶ್ ನಿರ್ಲಕ್ಷ್ಯತನದಿಂದ ಬಸ್ ಮುಂದಕ್ಕೆ ಚಲಿಸಲು ಸೂಚನೆ ನೀಡಿದ ಪರಿಣಾಮ ಚಾಲಕ ಇಲಿಯಾಸ್ ಒಮ್ಮೆಲೇ ಬಸ್ ಚಲಾಯಿಸಿದ್ಧಾನೆ.
ಆಗ ಕೃಷ್ಣ ನಾಯಕ್ ಅವರು ಬಸ್ಸಿನ ಮುಂಭಾಗದ ಬಾಗಿಲಿನಿಂದ ಹತ್ತುತ್ತಿರುವಾಗ ಹಿಡಿತ ತಪ್ಪಿ ಡಾಂಬಾರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಹಿಂಬದಿ ಚಕ್ರ ಅವರ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಕೃಷ್ಣ ನಾಯಕ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka