ಟಯರ್ ಅಂಗಡಿಯಲ್ಲಿ ಭಾರೀ ಬೆಂಕಿ ಅನಾಹುತ! - Mahanayaka
10:19 PM Friday 19 - December 2025

ಟಯರ್ ಅಂಗಡಿಯಲ್ಲಿ ಭಾರೀ ಬೆಂಕಿ ಅನಾಹುತ!

ujire
31/08/2022

ಬೆಳ್ತಂಗಡಿ: ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಸಮೀಪದ ಅನಾರ್ ಟಯರ್ ಅಂಗಡಿಯಲ್ಲಿ‌ ಬೆಂಕಿ‌ ಅನಾಹುತ ಸಂಭವಿಸಿದೆ.

ಬುಧವಾರ ಅಪರಾಹ್ನದ ವೇಳೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವ ರೀತಿಯಾಗಿ ಬೆಂಕಿ ಹಿಡಿದಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ರಾಜೀವ್ ಅನಾರ್ ಮಾಲೀಕತ್ವದ ಅಂಗಡಿಯಲ್ಲಿ ಬೆಂಕಿ‌ ಅನಾಹುತ ಸಂಭವಿಸಿದ್ದು, ಅಂಗಡಿ‌ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇನ್ನು ಪಕ್ಕದಲ್ಲಿದ್ದ ಅಂಗಡಿಗಳಿಗೂ‌ ಬೆಂಕಿ‌ ತಗುಲಿ‌ದೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ‌ ಸಿಬ್ಬಂದಿ‌ ಬಂದು ಸ್ಥಳೀಯರ ಸಹಕಾರದೊಂದಿಗೆ  ಬೆಂಕಿ‌ ನಂದಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ