ಮಂಗಳೂರಿಗೆ ಆಗಮಿಸುವವರ ಗಮನಕ್ಕೆ: ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಸಂಚಾರ ವ್ಯವಸ್ಥೆ ಬದಲಾವಣೆ - Mahanayaka

ಮಂಗಳೂರಿಗೆ ಆಗಮಿಸುವವರ ಗಮನಕ್ಕೆ: ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಸಂಚಾರ ವ್ಯವಸ್ಥೆ ಬದಲಾವಣೆ

modi program
31/08/2022

ಪ್ರಧಾನಿ ಮೋದಿ ಶುಕ್ರವಾರ ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆ ಮಂಗಳೂರಿಗೆ ಆಗಮಿಸುತ್ತಿದ್ದು, ಸಿದ್ದತೆ ಭರದಿಂದ ಸಾಗ್ತಿದೆ. ಭದ್ರತೆಯ ಹಿನ್ನೆಲೆಯಲ್ಲಿ ಮತ್ತು ಜನರಿಗೆ ಸಮಸ್ಯೆಯಾಗದಂತೆ ಮಂಗಳೂರಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ವಿವಿಧೆಡೆಯಿಂದ ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಸೆ.2ರಂದು ಬೆಳಗ್ಗೆ 6ರಿಂದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಜಂಕ್ಷನ್ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಮಂಗಳೂರಿನ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್ ನಿಂದ ಬರುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ತೆರಳಲಿದೆ. ಉಡುಪಿಗೆ ಹೋಗಲು ಬಿಕರ್ನಕಟ್ಟೆಯಿಂದ ವಾಮಂಜೂರು- ಮೂಡುಬಿದಿರೆ- ಕಾರ್ಕಳ ರಸ್ತೆ ಬಳಸಬೇಕು. ಮೈಸೂರು, ಮಡಿಕೇರಿ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯದ ಮೂಲಕ ಹೋಗಬೇಕು. ಬೆಂಗಳೂರಿಗೆ ತೆರಳುವವರು. ಬಿಕರ್ನಕಟ್ಟೆ-ಪಡೀಲ್-ಬಿ.ಸಿ.ರೋಡ್-ಉಪ್ಪಿನಂಗಡಿ ಮೂಲಕ ರಸ್ತೆ ಮೂಲಕ ಸಾಗಬೇಕು.  ಕಾಸರಗೋಡಿಗೆ ಹೋಗುವವರು ಪಡೀಲ್ – ಪಂಪ್‌ ವೆಲ್ – ತೊಕ್ಕೊಟ್ಟು ಮೂಲಕ ಹೋಗಬಹುದು. ಪೊರ್ಕೋಡಿ ಜಂಕ್ಷನ್ ನಿಂದ ಜೋಕಟ್ಟೆ-ಕಾನಾ-ಸುರತ್ಕಲ್ ಹಾಗೂ ಏರ್‌ಪೋರ್ಟ್ ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ತೆರಳಬಹುದು. ಮುಲ್ಕಿ ಜಂಕ್ಷನ್ ನಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಬರಬಹುದು. ಲೇಡಿಹಿಲ್ ಮೂಲಕ ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್‌ಗೆ ವಾಹನ ಸಂಚಾರ ಇದೆ.

ಅಲ್ಲದೇ ಪ್ರಧಾನಿಯವರ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್‌ಗೆ 15 ಕಡೆಗಳಲ್ಲಿ ಪೊಲೀಸ್ ಇಲಾಖೆ ಸ್ಥಳ ಗುರುತಿಸಿದೆ ಆ ವಿವರಗಳು ಕೆಳಗಿನಂತಿದೆ.

1) ಡೆಲ್ಟಾ ಗ್ರೌಂಡ್: ಪೊಲೀಸ್ ಪಾಸ್ ಪಡೆದ ವಿವಿಐಪಿ 300 ಕಾರುಗಳ ಪಾರ್ಕಿಂಗ್

2) ಸೋಮಯಾಜಿ ಮೈದಾನ ಕೂಳೂರು: ಪೊಲೀಸ್ ಪಾಸ್ ಪಡೆದ 500 ವಿಐಪಿ ಕಾರುಗಳ ಪಾರ್ಕಿಂಗ್

3) ತಣ್ಣೀರು ಬಾವಿ ರಸ್ತೆ ಹಾಗೂ ಪಣಂಬೂರು: ಉಡುಪಿ, ಸುರತ್ಕಲ್, ಕಾವೂರು ಕಡೆಯಿಂದ ಬರುವ ವಾಹನಗಳು- 1500 ಬಸ್ 500 ಕಾರುಗಳು

4) ಎನ್ಎಂಪಿಎ ಮೈದಾನ, ಪಣಂಬೂರು: ಬಜಪೆ, ಕಾವೂರು ಹಾಗೂ ಉಡುಪಿ ವಾಹನಗಳು – 200 ಬಸ್‌, 600 ಬೈಕ್‌ಗಳು

5) ಎಂ.ಎಸ್.ಇ.ಝಡ್ ರಸ್ತೆ, ಪಣಂಬೂರು: ಉಡುಪಿ, ಸುರತ್ಕಲ್ ಕಡೆಯ ವಾಹನಗಳು – 1000 ಲಘು ವಾಹನಗಳು

6) ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಕೂಳೂರು ಪಂಜಿಮೊಗರು: ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್ 100 ಕಾರುಗಳು

7) ಗೋಲ್ಡ್ ಪಿಂಚ್ ಮೈದಾನದ ಪೂರ್ವ ಭಾಗದ ಅಮೆಜಾನ್ ಗೋಡಾನ್ ಹತ್ತಿರ: ಎಲ್ಲಾ ಭಾಗದ ವಾಹನ ಪಾರ್ಕಿಂಗ್- 2000 ಕಾರುಗಳು ಮತ್ತು 3000 ಬೈಕ್ಸ್‌

8) ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನದಿಂದ ಕಾವೂರು ಜಂಕ್ಷನ್: ಬೆಳ್ತಂಗಡಿ ಹಾಗೂ ಕಾಸರಗೋಡು ಕಡೆಯ – 350 ಬಸ್‌ಗಳು

9) ಕೆಪಿಟಿ ಮೈದಾನ: ಮೂಡುಬಿದಿರೆ, ಮುಲ್ಕಿ ತಾಲೂಕಿನ – 200 ಬಸ್‌ಗಳು

10) ವ್ಯಾಸ ನಗರ ಮೈದಾನ: ಪುತ್ತೂರು ಮತ್ತು ಸುಳ್ಯ ತಾಲೂಕಿನ – 50 ಬಸ್‌ಗಳು

11) ಪದುವಾ ಮೈದಾನ: ಪುತ್ತೂರು ಮತ್ತು ಸುಳ್ಯ ತಾಲೂಕಿನ – 250 ಬಸ್‌ಗಳು

12) ಕರಾವಳಿ ಉತ್ಸವ ಮೈದಾನ: ಮಂಗಳೂರು ನಗರ ವ್ಯಾಪ್ತಿಯಿಂದ ಆಗಮಿಸುವ 250 ಬಸ್‌ಗಳು

13) ಉರ್ವ ಮಾರುಕಟ್ಟೆ ಮೈದಾನ: ಉಳ್ಳಾಲ ತಾಲೂಕು ವ್ಯಾಪ್ತಿಯಿಂದ ಬರುವ 100 ಬಸ್‌ಗಳು

14) ಲೇಡಿಹಿಲ್ ಪೊಂಪೈ ಚರ್ಚ್: ಉಳ್ಳಾಲ ತಾಲೂಕು ವ್ಯಾಪ್ತಿಯಿಂದ ಬರುವ 100 ಬಸ್‌ಗಳು

15) ಉರ್ವಸ್ಟೋರ್ ಮೈದಾನದಿಂದ ಇನ್ಫೋಸಿಸ್ ಹಿಂಭಾಗದ ಕುಂಟಿಕಾನ ರಸ್ತೆಯವರೆಗೆ: ಬಂಟ್ವಾಳ ತಾಲ್ಲೂಕು ವ್ಯಾಪ್ತಿಯಿಂದ ಬರುವ 300 ಬಸ್‌ ಗಳು

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ